1.2 ಬಿಲಿಯನ್ ಡಾಲರ್ ನೆರವಿನಿಂದ ಪಾಕಿಸ್ತಾನದ ನೆರವಿಗೆ ಧಾವಿಸಿದ ಚೀನಾ

Published On :
ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಪಾಕಿಸ್ತಾನಕ್ಕೆ ಚೀನಾ ಎರಡನೇ ಬಾರಿ ನೆರವು ನೀಡಿದೆ. 2016 ರಲ್ಲಿ 900 ಮಿಲಿಯನ್ ಡಾಲರ್ ಹಣಕಾಸಿನ ನೆರವು ನೀಡಿದ್ದ ಚೀನಾ ಈ 2017 ರಲ್ಲಿ 300 ಮಿಲಿಯನ್ ಡಾಲರ್ ನೆರವು ನೀಡಿದೆ.
ಚೀನಾದ ಆರ್ಥಿಕ ನೆರವು ಪಾಕಿಸ್ತಾನದಲ್ಲಿ ವಿದೇಶಿ ಮೀಸಲು ಸಂಗ್ರಹ ಕುಸಿತ ಕಂಡಿರುವುದನ್ನು ಹಾಗೂ ಆಮದು ಏರಿಕೆಯಾಗುತ್ತಿರುವ ನಡುವೆ ರಫ್ತು ಇಳಿಕೆಯಾಗುತ್ತಿರುವುದಕ್ಕೆ ಸ್ಪಷ್ಟ ಚಿತ್ರಣವಾಗಿದೆ ಎಂದು ಮಾಧ್ಯಮಗಳು ವಿಶ್ಲೇಷಿಸುತ್ತಿವೆ.
ಈ ನಡುವೆಯೇ ಪಾಕಿಸ್ತಾನ ಹಾಗೂ ಅಮೆರಿಕಾದ ದ್ವಿಪಕ್ಷೀಯ ಬಾಂಧವ್ಯ ಕುಸಿಯುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಚೀನಾ- ಪಾಕಿಸ್ತಾನದ ದ್ವಿಪಕ್ಷೀಯ ಸಂಬಂಧವೂ ಬೆಳೆಯುತ್ತಿರುವುದರ ಸಂಕೇತವಾಗಿದೆ. ಸಿಪಿಇಸಿ ಯೋಜನೆಯಡಿ ಚೀನಾ ವಿವಿಧ ಕ್ಷೇತ್ರಗಳಲ್ಲಿನ ಯೋಜನೆಗಳಿಗೆ ಅನುಮತಿ ನೀಡಿದ್ದು, ಪಾಕಿಸ್ತಾನದಲ್ಲಿನ ಚೀನಾ ಹೂಡಿಕೆ 55 ಬಿಲಿಯನ್ ಡಾಲರ್ ನಿಂದ 62 ಬಿಲಿಯನ್ ಡಾಲರ್ ಗೆ ಏರಿಕೆಯಾಗಲಿದೆ.
ಚೀನಾ ಪಾಕಿಸ್ತಾನಕ್ಕೆ ನೀಡಿರುವ ಸಾಲ ಹಾಗೂ ಹೂಡಿಕೆ ರೂಪದಲ್ಲಿ ನೀಡಿರುವ ನೆರವಿಗೆ 3 ದಶಕಗಳಲ್ಲಿ 90 ಬಿಲಿಯನ್ ಡಾಲರ್ ನಷ್ಟು ಪಾವತಿ ಮಾಡಬೇಕಾಗುತ್ತದೆ. 2020-25 ರ ವೇಳೆಗೆ ಸಿಪಿಇಸಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಚೀನಾಗೆ ಸರಾಸರಿ 3 ಬಿಲಿಯನ್ ನಷ್ಟು ಹಣ ಮರುಪಾವತಿ ಮಾಡಬೇಕಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


