ಕ್ಯೂಬಾ: ಸೇನಾಪಡೆ ವಿಮಾನ ಪತನ; 8 ಮಂದಿ ಸಾವು!

ಕ್ಯೂಬಾದ ಮಿಲಿಟರಿ ಪಡೆಯ ವಿಮಾನವೊಂದು ಪತನವಾಗಿದ್ದು, ವಿಮಾನದಲ್ಲಿದ್ದ 8 ಮಂದಿ ಸಿಬ್ಬಂದಿಗಳು ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಹವಾನ: ಕ್ಯೂಬಾದ ಮಿಲಿಟರಿ ಪಡೆಯ ವಿಮಾನವೊಂದು ಪತನವಾಗಿದ್ದು, ವಿಮಾನದಲ್ಲಿದ್ದ 8 ಮಂದಿ ಸಿಬ್ಬಂದಿಗಳು ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.

ರಾಜಧಾನಿ ಹವಾನದ ಆರ್ಟೆಮಿಸಾ ಪ್ರಾಂತ್ಯದಲ್ಲಿ ಶನಿವಾರ ವಿಮಾನ ಪರ್ವತಕ್ಕೆ ಅಪ್ಪಳಿಸಿದ್ದು, ಪರಿಣಾಮ ಪೈಲಟ್ ಸೇರಿದಂತೆ ಅದರಲ್ಲಿದ್ದ ಮಿಲಿಟರಿ ಪಡೆಯ ಎಂಟು ಜನ ಸಿಬ್ಬಂದಿ ಮೃತಪಟ್ಟಿದ್ದಾರೆ.

ಎಎನ್-26 ರಷ್ಯಾದ ನಿರ್ಮಿತ ವಿಮಾನ ಇದಾಗಿದ್ದು ಬೆಳಿಗ್ಗೆ 6.38 ಕ್ಕೆ ಹವಾನಾ ಹೊರವಲಯದಲ್ಲಿರುವ ಪ್ಲೆಯಾ ಬರಾಕೊವಾ ವಿಮಾನ ನಿಲ್ದಾಣದಿಂದ ಕ್ಯಾಂಡೆಲಾರಿಯಾ ಎಂಬ ಪಟ್ಟಣಕ್ಕೆ ಹೊರಟಿತ್ತು. ಈ ವೇಳೆ ಅಲ್ಲಿನ ಲೊಮಾ ಡಿ  ಲಾ ಪಿಮೆಂಟಾ ಎಂಬ ಪರ್ವತಕ್ಕೆ ವಿಮಾನ ಅಪ್ಪಳಿಸಿದ್ದರಿಂದ ಈ ದುರಂತ ಸಂಭವಿಸಿದೆ. ಕ್ಯೂಬಾದ ಕ್ರಾಂತಿಕಾರಿ ಸಶಸ್ತ್ರ ಪಡೆಗಳಿಗೆ ಸೇರಿದ ವಿಮಾನ ಇದಾಗಿದ್ದು, ಅಪಘಾತ ಸಂಬಂಧ ಕ್ಯೂಬಾ ಸೇನೆ ತನಿಖೆಗೆ ಆದೇಶಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com