ಬ್ರಿಟನ್ ಸಂಸತ್ ಉದ್ದೇಶಿಸಿ ಮಾತನಾಡಲು ಟ್ರಂಪ್ ಗೆ ಅವಕಾಶ ನೀಡುವುದಿಲ್ಲ: ಸಂಸತ್ ಸಭಾಧ್ಯಕ್ಷ

ಡೊನಾಲ್ಡ್ ಟ್ರಂಪ್ ಗೆ ಬ್ರಿಟನ್ ಸಂಸತ್ ನ್ನುದ್ದೇಶಿಸಿ ಮಾತನಾಡಲು ಟ್ರಂಪ್ ಗೆ ಆಹ್ವಾನ ನೀಡುವುದಿಲ್ಲ ಎಂದು ಅಲ್ಲಿನ ಸಂಸತ್ ನ ಸ್ಪೀಕರ್ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Updated on: 
ಲಂಡನ್: ಮುಸ್ಲಿಂ ರಾಷ್ಟ್ರದ ನಿರಾಶ್ರಿತರಿಗೆ, ವಲಸಿಗರಿಗೆ ಅಮೆರಿಕ ಪ್ರವೇಶ ನಿರಾಕರಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಬ್ರಿಟನ್ ಸಂಸತ್ ನ್ನುದ್ದೇಶಿಸಿ ಮಾತನಾಡಲು ಟ್ರಂಪ್ ಗೆ ಆಹ್ವಾನ ನೀಡುವುದಿಲ್ಲ ಎಂದು ಅಲ್ಲಿನ ಸಂಸತ್ ನ ಸ್ಪೀಕರ್ ಹೇಳಿದ್ದಾರೆ. 
ಬ್ರಿಟನ್ ಸಂಸತ್ ಜನಾಂಗೀಯ ತಾರತಮ್ಯವನ್ನು ಸಹಿಸುವುದಿಲ್ಲ. ಆದ್ದರಿಂದ ಸಧ್ಯದಲ್ಲೇ ಬ್ರಿಟನ್ ಗೆ ಭೇಟಿ ನೀಡಲಿರುವ ಡೊನಾಲ್ಡ್ ಟ್ರಂಪ್ ಗೆ ಬ್ರಿಟನ್ ಸಂಸತ್ ನ್ನುದ್ದೇಶಿಸಿ ಮಾತನಾಡಲು ಆಹ್ವಾನ ನೀಡುವುದಿಲ್ಲ ಎಂದು ಹೌಸ್ ಆಫ್ ಕಾಮನ್ಸ್ ನ ಸಭಾಧ್ಯಕ್ಷ ಬೆರ್ಕೋ ಹೇಳಿದ್ದಾರೆ. ಅನ್ಯ ದೇಶದ ಸಂಸತ್ ನ್ನುದ್ದೇಶಿಸಿ ಮಾತನಾಡುವುದು ವ್ಯಕ್ತಿಗತ ಹಕ್ಕು ಅಲ್ಲ. ಅದೊಂದು ಅತ್ಯುನ್ನತ ಗೌರವ. ಅದನ್ನು ಸಂಪಾದಿಸಿಕೊಳ್ಳಬೇಕೇ ಹೊರತು ಪಡೆಯಲು ಸಾಧ್ಯವಿಲ್ಲ ಎಂದು ಬೆರ್ಕೋ ತಿಳಿಸಿದ್ದಾರೆ. 
ಡೊನಾಲ್ಡ್ ಟ್ರಂಪ್ ಮುಸ್ಲಿಂ ರಾಷ್ಟ್ರದ ವಲಸಿಗರಿಗೆ ಪ್ರವೇಶ ನಿರಾಕರಿಸುವುದಕ್ಕೆ ಮುನ್ನವೂ ಇದೇ ನಿಲುವು ಹೊಂದಿದ್ದಾಗಿ ತಿಳಿಸಿರುವ ಸಭಾಧ್ಯಕ್ಷರು, ನೂತನ ವಲಸೆ ನೀತಿಯನ್ನು ಪ್ರಕಟಿಸಿದ ನಂತರ ತಮ್ಮ ನಿಲುವು ಮತ್ತಷ್ಟು ಗಟ್ಟಿಯಾಗಿದ್ದು, ಯಾವುದೇ ಕಾರಣಕ್ಕೂ ಟ್ರಂಪ್ ಗೆ ಸಂಸತ್ ನ್ನುದ್ದೇಶಿಸಿ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಸಭಾಧ್ಯಕ್ಷರ ಹೇಳಿಕೆಯನ್ನು ಬ್ರಿಟನ್ ಸಂಸದರು ಕರತಾಡನದ ಮೂಲಕ ಬೆಂಬಲಿಸಿದ್ದಾರೆ. 
ಅಮೆರಿಕಾದೊಂದಿಗೆ ನಾವು ಮೌಲ್ಯಯುತ ಬಾಂಧವ್ಯ ಹೊಂದಿದ್ದೇವೆ. ಅದೇನೇ ಆಗಿದ್ದರೂ ಸಮಾನತೆಯನ್ನು ಬೆಂಬಲಿಸುವ ಬ್ರಿಟನ್ ನ ಸಂಸತ್ ನಲ್ಲಿ ಟ್ರಂಪ್ ಗೆ ಆಹ್ವಾನ ನೀಡುವುದಿಲ್ಲ ಎಂಬುದು ಬ್ರಿಟನ್ ಸಂಸತ್ ಸಭಾಧ್ಯಕ್ಷರ ನಿಲುವಾಗಿದೆ. 
ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದ ನಂತರ ಅವರೊಂದಿಗೆ ಮಾತನಾಡಿದ್ದ ಬ್ರಿಟನ್ ಪ್ರಧಾನಿ ಥೆರೇಸಾ ಮೇ, ಬ್ರಿಟನ್ ಗೆ ಭೇಟಿ ನೀಡುವಂತೆ ಡೊನಾಲ್ಡ್ ಟ್ರಂಪ್ ಗೆ ಆಹ್ವಾನ ನೀಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com