ಸುಳ್ ಸುದ್ದಿ ಜನರ ಶತ್ರು: ಡೊನಾಲ್ಡ್ ಟ್ರಂಪ್

ಮಾಧ್ಯಮಗಳ ಮೇಲೆ ವಾಗ್ದಾಳಿ ಮುಂದುವರೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳ್ ಸುದ್ದಿ ಜನರ ಶತ್ರು ಎಂದು ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Updated on: 
ವಾಷಿಂಗ್ ಟನ್: ಮಾಧ್ಯಮಗಳ ಮೇಲೆ ವಾಗ್ದಾಳಿ ಮುಂದುವರೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳ್ ಸುದ್ದಿ ಜನರ ಶತ್ರು ಎಂದು ಹೇಳಿದ್ದು, ಅನಾಮಿಕ ವ್ಯಕ್ತಿಗಳು ನೀಡುವ ಮಾಹಿತಿಯ ಆಧಾರದಲ್ಲಿ ಸುದ್ದಿ ಪ್ರಕಟಿಸುವುದಕ್ಕೆ ಮಾಧ್ಯಮಗಳಿಗೆ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ. 
ಕೆಲವು ದಿನಗಳ ಹಿಂದೆಯೂ ಸುಳ್ ಸುದ್ದಿ ಜನರ ಶತ್ರು ಎಂದು ಹೇಳಿದ್ದೆ. ಸುಳ್ ಸುದ್ದಿಗಳು ನಿಜವಾಗಿಯೂ ಜನರ ಶತ್ರುವಾಗಿದ್ದು, ಸುಳ್ ಸುದ್ದಿಯನ್ನೇ ಬಿತ್ತರಿಸುವ ಮಾಧ್ಯಮಗಳು ನಿಜ ಹೇಳುವುದಿಲ್ಲ ಎಂದು, ಅನಾಮಿಕ ವ್ಯಕ್ತಿಗಳು ನೀಡುವ ಮಾಹಿತಿಯ ಆಧಾರದಲ್ಲಿ ಸುದ್ದಿ ಪ್ರಕಟವಾದಂತೆ ಕ್ರಮ ಕೈಗೊಳ್ಳುವುದಾಗಿ ಟ್ರಂಪ್ ಹೇಳಿದ್ದಾರೆ. 
ಇನ್ನು ಮಾಧ್ಯಮಗಳು ನಡೆಸುವ ಸಮೀಕ್ಷೆ, ಅಭಿಪ್ರಾಯ ಸಂಗ್ರಹದ ರೀತಿಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ಡೊನಾಲ್ಡ್ ಟ್ರಂಪ್, ಮಾಧ್ಯಮಗಳು ಸರಿಯಾಗಿ ಅಭಿಪ್ರಾಯ ಸಂಗ್ರಹ ಮಾಡುತ್ತಿಲ್ಲ. ತಪ್ಪು ಅಭಿಪ್ರಾಯ ಮೂಡಿಸುವಂತಿರುತ್ತವೆ ಎಂದಿದ್ದು, ತಾವು ಚುನಾವಣೆಯಲ್ಲಿ ಸೋಲುವುದಾಗಿ ಮಾಧ್ಯಮಗಳು ಪ್ರಕಟಿಸಿದ್ದನ್ನು ಟ್ರಂಪ್ ಉದಾಹರಣೆಯಾಗಿ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com