ಹೆಚ್-1ಬಿ ವೀಸಾಗೆ ಸಂಬಂಧಿಸಿದ ಮಸೂದೆ ಅಮೆರಿಕಾ ಕಾಂಗ್ರೆಸ್ ನಲ್ಲಿ ಮರು ಮಂಡನೆ

ಭಾರತದಂತಹ ದೇಶಗಳಿಂದ ಕುಶಲ ಕೆಲಸಗಾರರಿಗೆ ಅಮೆರಿಕದಲ್ಲಿ ಉನ್ನತ ಹುದ್ದೆ ಗಳಿಸಲು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ವಾಷಿಂಗ್ಟನ್: ಭಾರತದಂತಹ ದೇಶಗಳಿಂದ ಕುಶಲ ಕೆಲಸಗಾರರಿಗೆ ಅಮೆರಿಕದಲ್ಲಿ ಉನ್ನತ ಹುದ್ದೆ ಗಳಿಸಲು ಪ್ರಯೋಜನವಾಗುವ ಹೆಚ್-1ಬಿ ಕಾರ್ಯಕ್ರಮದಡಿ ಪ್ರಮುಖ ಬದಲಾವಣೆಗಳನ್ನು ತರಲು ಅಮೆರಿಕಾ ಸಂಸತ್ತಿನಲ್ಲಿ ಮಸೂದೆಯನ್ನು ಮರು ಮಂಡಿಸಲಾಗಿದೆ.
'ರಕ್ಷಣೆ ಮತ್ತು ಅಮೆರಿಕನ್ನರ ಬೆಳವಣಿಗೆಗೆ ಉದ್ಯೋಗಗಳು ಕಾಯ್ದೆ, ಹೆಚ್ -1ಬಿ ವೀಸಾ ವಿನಾಯ್ತಿಗೆ ಬೇಕಾದ ಅರ್ಹತೆ ಅಗತ್ಯಗಳ ಪ್ರಮುಖ ಬದಲಾವಣೆ ಮಾಡಲಾಗಿದ್ದು, ಇದನ್ನು ನಿನ್ನೆ ಕ್ಯಾಲಿಫೋರ್ನಿಯಾದ ರಿಪಬ್ಲಿಕನ್ ಡರ್ರೆಲ್ಲ್ ಇಸ್ಸಾ ಮತ್ತು ಸ್ಕಾಟ್ಟ್ ಪೀಟರ್ಸ್ ಮತ್ತೆ ಮಂಡನೆ ಮಾಡಿದ್ದಾರೆ.
ಉದ್ಯೋಗಕ್ಕಾಗಿ ಹೆಚ್-1ಬಿ ವೀಸಾದಡಿ ಅಮೆರಿಕಕ್ಕೆ ಹೋದ ಬೇರೆ ದೇಶಗಳ ಕುಶಲ ಕೆಲಸಗಾರರ ವೇತನ ಪ್ರತಿ ವರ್ಷಕ್ಕೆ 1,00,000 ಅಮೆರಿಕನ್ ಡಾಲರ್ ಆಗಲಿದೆ ಮತ್ತು ಸ್ನಾತಕೋತ್ತರ ಪದವಿ ವಿನಾಯ್ತಿಯನ್ನು ತೆಗೆದುಹಾಕಲಿದೆ.
ಹೆಚ್-1 ಬಿ ವೀಸಾವನ್ನು ಮತ್ತೆ ಜಾರಿಗೆ ತಂದಿರುವುದರಿಂದ ಉದ್ಯೋಗಸ್ಥರು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕಬಹುದು ಮತ್ತು ವಿಶ್ವದ ಅತ್ಯಂತ ಪ್ರತಿಭಾವಂತರಿಗೆ ಉದ್ಯೋಗ ಸಿಗಲಿದೆ.
ಅಮೆರಿಕಾದ ಡಿಸ್ನೆ, ಸೊಕಾಲ್ ಎಡಿಸನ್ ಮೊದಲಾದ ಕಂಪೆನಿಗಳು ಹೆಚ್ 1ಬಿ ವೀಸಾ ಯೋಜನೆ ದುರ್ಬಳಕೆ ಮಾಡಿಕೊಂಡು ಅಮೆರಿಕಾ ನೌಕರರ ಬದಲಿಗೆ ವಿದೇಶಿ ನೌಕರರನ್ನು ತರಲು ಯತ್ನಿಸಿ ಭಾರೀ ಟೀಕೆಗೆ ಗುರಿಯಾಗಿದ್ದವು. 
ಅಮೆರಿಕಾ ಮತ್ತೆ ಉತ್ತಮ ಪ್ರಗತಿ ಕಾಣಬೇಕಾದರೆ ವಿಶ್ವದ ಅತ್ಯುತ್ತಮ ಪ್ರತಿಭಾವಂತರು ಇಲ್ಲಿಗೆ ಬರಬೇಕು. ಅದೇ ತರಹ ಕಂಪೆನಿಗಳು ಹೆಚ್-1 ವೀಸಾ ದುರ್ಬಳಕೆ ಮಾಡಿಕೊಂಡು ಅಮೆರಿಕಾ ನೌಕರರ ಬದಲಿಗೆ ಹೊರಗುತ್ತಿಗೆ ಮೂಲಕ ವಿದೇಶಗಳಿಂದ ಕಡಿಮೆ ವೇತನಕ್ಕೆ ನೌಕರರನ್ನು ನೇಮಿಸಿಕೊಳ್ಳುವುದಕ್ಕೆ ಕಡಿವಾಣ ಬೀಳುತ್ತದೆ ಎನ್ನುತ್ತಾರೆ ಇಸ್ಸಾಕ್. 
ಇಂದು ಜಾರಿಗೆ ತರುತ್ತಿರುವ ಶಾಸನ ಎರಡೂ ಉದ್ದೇಶಗಳನ್ನು ಈಡೇರಿಸುತ್ತದೆ. ಮಸೂದೆ ಮಂಡನೆ ಮಾಡಿದ ನಂತರ ನಮ್ಮ ದೇಶದಲ್ಲಿ ಪ್ರತಿಭಾವಂತರು ಇಲ್ಲದಿದ್ದರೆ ಮಾತ್ರ ಬೇರೆ ದೇಶಗಳಿಂದ ಪ್ರತಿಭಾವಂತರನ್ನು ಕಂಪೆನಿಗಳು ನೇಮಿಸಿಕೊಳ್ಳುತ್ತವೆ  ಎಂದು ಇಸ್ಸಾ ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com