ಜ.28 ರಂದು ಟ್ರಂಪ್-ಪುಟಿನ್ ದೂರವಾಣಿ ಮಾತುಕತೆ

ಜ.28 ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಕರೆ ಮಾಡಲಿದ್ದಾರೆ.
ಜ.28 ರಂದು ಟ್ರಂಪ್-ಪುಟಿನ್ ದೂರವಾಣಿ ಮಾತುಕತೆ
ಜ.28 ರಂದು ಟ್ರಂಪ್-ಪುಟಿನ್ ದೂರವಾಣಿ ಮಾತುಕತೆ
ಮಾಸ್ಕೋ: ಜ.28 ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಕರೆ ಮಾಡಲಿದ್ದಾರೆ. 
ವ್ಲಾಡಿಮಿರ್ ಪುಟಿನ್ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತನಾಡುವುದನ್ನು ರಷ್ಯಾದ ಅಧ್ಯಕ್ಷರ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಜ.20 ರಂದು ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ಬಳಿಕ ಉಭಯ ನಾಯಕರು ಮೊದಲ ಬಾರಿಗೆ ದೂರವಾಣಿ ಮೂಲಕ ಮಾತನಾಡಲಿದ್ದಾರೆ. ಇದಕ್ಕೂ ಮುನ್ನ ಚುನಾವಣಾ ಗೆಲುವಿಗೆ ಅಭಿನಂದಿಸಲು ನ.8 ರಂದು ವ್ಲಾಡಿಮಿರ್ ಪುಟಿನ್ ಡೊನಾಲ್ಡ್ ಟ್ರಂಪ್ ಅವರಿಗೆ ಕರೆ ಮಾಡಿ ಮಾತನಾಡಿದ್ದರು. 
ಅಧಿಕಾರ ವಹಿಸಿಕೊಳ್ಳುವುದಕ್ಕೂ ಮುನ್ನ ಟ್ರಂಪ್ ಜತೆ ಮಾತುಕತೆ ನಡೆಸಿದ್ದ ವ್ಲಾಡಿಮಿರ್ ಪುಟಿನ್ ಅಮೆರಿಕ-ರಷ್ಯಾ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸುವ ಕುರಿತು ಚರ್ಚಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com