ಫೆಬ್ರವರಿಯಲ್ಲಿ ಡೊನಾಲ್ಡ್ ಟ್ರಂಪ್- ಜಪಾನ್ ಪ್ರಧಾನಿ ಭೇಟಿ

ಫೆಬ್ರವರಿ 10 ರಂದು ಜಪಾನ್ ಪ್ರಧಾನಿ ಶಿಂಜೋ ಅಬೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ್ನು ಭೇಟಿ ಮಾಡಲಿದ್ದಾರೆ ಎಂದು ಶ್ವೇತ ಭವನ ತಿಳಿಸಿದೆ.
ಫೆಬ್ರವರಿಯಲ್ಲಿ ಡೊನಾಲ್ಡ್ ಟ್ರಂಪ್- ಜಪಾನ್ ಪ್ರಧಾನಿ ಭೇಟಿ
ಫೆಬ್ರವರಿಯಲ್ಲಿ ಡೊನಾಲ್ಡ್ ಟ್ರಂಪ್- ಜಪಾನ್ ಪ್ರಧಾನಿ ಭೇಟಿ
ವಾಷಿಂಗ್ ಟನ್: ಫೆಬ್ರವರಿ 10 ರಂದು ಜಪಾನ್ ಪ್ರಧಾನಿ ಶಿಂಜೋ ಅಬೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ್ನು ಭೇಟಿ ಮಾಡಲಿದ್ದಾರೆ ಎಂದು ಶ್ವೇತ ಭವನ ತಿಳಿಸಿದೆ. 
ಜ.28 ರಂದು ಡೊನಾಲ್ಡ್ ಟ್ರಂಪ್- ಶಿಂಜೋ ಅಬೆ ದೂರವಾಣಿ ಮೂಲಕ ಮಾತನಾಡಿದ್ದು ಉಭಯ ನಾಯಕರ ಭೇಟಿ ಫೆ.10 ಕ್ಕೆ ನಿಗದಿಯಾಗಿದೆ ಎಂದು ಶ್ವೇತ ಭವನ ಮಾಹಿತಿ ನೀಡಿದೆ. ದ್ವಿಪಕ್ಷೀಯ ಮಾತುಕತೆ ವೇಳೆ ಇಬ್ಬರು ನಾಯಕರು ಅಮೆರಿಕ-ಜಪಾನ್ ಸಹಕಾರದ ಬಗ್ಗೆ ಚರ್ಚೆ ನಡೆಸಿದ್ದಾರೆ. 
ಮಾತುಕತೆ ವೇಳೆ ಜಪಾನ್ ಗೆ ಭದ್ರತೆಗೆ ಅಮೆರಿಕ ಬದ್ಧವಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಸುಮಾರು 42 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದು, ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದರ ಬಗ್ಗೆ ಹಾಗೂ ಉತ್ತರ ಕೊರಿಯಾದಿಂದ ಸಂಭವಿಸಬಹುದಾಗಿರುವ ಅಪಾಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com