ಕೌಲಲಾಂಪುರ: ಮಲೇಷ್ಯಾದ ಬೊರ್ನಿಯೊ ದ್ವೀಪದಲ್ಲಿ 31 ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ದೋಣಿಯೊಂದು ನಾಪತ್ತೆಯಾಗಿದೆ.
ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿರುವ ಮೆಂಗಲಮ್ ದ್ವೀಪಕ್ಕೆ ದೋಣಿ ಪೂರ್ವ ಮಲೇಷ್ಯಾದ ಸಬಾಹ್ ಕೋಟ ಕಿನಾಬಾಲು ಎಂಬಲ್ಲಿ ಕಣ್ಮರೆಯಾಗಿದೆ. ಇದರಲ್ಲಿ ಒಟ್ಟು 31 ಮಂದಿ ಇದ್ದು 28 ಮಂದಿ ಚೀನಿ ಪ್ರವಾಸಿಗರಿದ್ದರು ಎಂದು ತಿಳಿದುಬಂದಿದೆ.
ದೋಣಿಗಾಗಿ ಪತ್ತೆ ಕಾರ್ಯ ಶುರುವಾಗಿದ್ದು ಪ್ರತಿಕೂಲ ವಾತಾವರಣ ಇದಕ್ಕೆ ಅಡ್ಡಿಯಾಗಿದೆ.