ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಭಾರತದ ಪ್ರಗತಿ ಬಗ್ಗೆ ಚೀನಾ ತೆಪ್ಪಗಿದ್ದು, ಪರಿಣಾಮಕಾರಿ ಕಾರ್ಯತಂತ್ರ ಅನುಸರಿಸಲಿ: ಚೀನಾ ಪತ್ರಿಕೆ

ಭಾರತದ ಆರ್ಥಿಕ ಮತ್ತು ಉತ್ಪಾದನಾ ಪ್ರಗತಿ ಬಗ್ಗೆ ಚೀನಾ ಕಾದು ನೋಡುತ್ತಲೇ ಅದಕ್ಕೆ ಪ್ರತಿಯಾಗಿ ಪರಿಣಾಮಕಾರಿ ಕಾರ್ಯತಂತ್ರ ಅನುಸರಿಸಬೇಕು ಎಂದು ಚೀನಾ ಪತ್ರಿಕೆ ಸರ್ಕಾರಕ್ಕೆ ಸಲಹೆ ನೀಡಿದೆ.

ಬೀಜಿಂಗ್: ಭಾರತದ ಆರ್ಥಿಕ ಮತ್ತು ಉತ್ಪಾದನಾ ಪ್ರಗತಿ ಬಗ್ಗೆ ಚೀನಾ ಕಾದು ನೋಡುತ್ತಲೇ ಅದಕ್ಕೆ ಪ್ರತಿಯಾಗಿ ಪರಿಣಾಮಕಾರಿ ಕಾರ್ಯತಂತ್ರ ಅನುಸರಿಸಬೇಕು ಎಂದು ಚೀನಾ ಪತ್ರಿಕೆ ಸರ್ಕಾರಕ್ಕೆ ಸಲಹೆ ನೀಡಿದೆ.

ಚೀನಾ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಚೀನಾ ಸರ್ಕಾರಕ್ಕೆ ಇಂತಹುದೊಂದು ಸಲಹೆ ನೀಡಿದ್ದು, "ಭಾರತ ದೊಡ್ಡ ಪ್ರಮಾಣದಲ್ಲಿ ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತಿದ್ದು, ತನ್ನ ಉತ್ಪಾದನಾ ವಲಯವನ್ನು ವಿಸ್ತರಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಆದರೆ ಚೀನಾ ಈ ಬಗ್ಗೆ ಸಮಾಧಾನವಾಗಿದ್ದು, ಆಧುನಿಕ ಯುಗಕ್ಕೆ ಹೆಚ್ಚು ಪರಿಣಾಮಕಾರಿ ಪ್ರಗತಿ ಕಾರ್ಯತಂತ್ರ ಅನುಸರಿಸಬೇಕು" ಎಂದು ಸಲಹೆ ಮಾಡಿವೆ.

"ದೊಡ್ಡ ಪ್ರಮಾಣದಲ್ಲಿ ವಿದೇಶಿ ಉತ್ಪಾದನಾ ಸಂಸ್ಥೆಗಳಿಂದ ಹೂಡಿಕೆಯಾಗುತ್ತಿರುವುದಕ್ಕೆ ಭಾರತದ ಆರ್ಥಿಕತೆ, ಉದ್ಯೋಗ ಹಾಗೂ ಕೈಗಾರಿಕಾ ಅಭಿವೃದ್ಧಿಯಲ್ಲಿ ಮಹತ್ವದ ಸ್ಥಾನವಿದೆ. ಇದರಿಂದ ಭಾರತದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗಲಿದ್ದು, ಈ ವಿದೇಶಿ ಹೂಡಿಕೆ ಭಾರತದ ಕೆಲ ಆಂತರಿಕ ದೌರ್ಬಲ್ಯಗಳನ್ನು ಬಗೆಹರಿಸಿ, ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ವಿಶೇಷವೆಂದರೆ ಚೀನಾ ಮೂಲದ ಕಂಪೆನಿಗಳು ಕೂಡಾ ಇದರಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಇದೇ ಕಾರಣಕ್ಕೆ ಚೀನಾ ಸಮಾಧಾನದಿಂದ ಭಾರತದ ಪ್ರಗತಿಯನ್ನು ಕಾದು ನೋಡುತ್ತಲೇ ಅದಕ್ಕೆ ಪ್ರತಿಯಾಗಿ ಪರಿಣಾಮಕಾರಿ ಉತ್ಪಾದನಾ ಕಾರ್ಯತಂತ್ರ ಅನುಸರಿಸಬೇಕಿದೆ ಎಂದು ಹೇಳಿದೆ.

ಅಂತೆಯೇ ಭಾರತದ ಪ್ರಗತಿಯನ್ನು ವಿದೇಶಿ ಹೂಡಿಕೆಯನ್ನು ಆಕರ್ಷಿಸಿದ ಕಾಲಘಟ್ಟದ ಪುನರಾವರ್ತನೆ ಇದು ಎಂದು ಪತ್ರಿಕೆ ಬಣ್ಣಿಸಿದ್ದು, ಭಾರತ ಕೂಡಾ ಇದರಲ್ಲಿ ಯಶಸ್ವಿಯಾಗಬಹುದು" ಎಂದು ಹೇಳಿದೆ. ಬಂಡವಾಳದ ಕೊರತೆ, ಅಭಿವೃದ್ಧಿ ಹೊಂದಿದ ಉತ್ಪಾದನಾ ವಲಯ ಹಾಗೂ ಕೌಶಲ್ಯಯುಕ್ತ ಉತ್ಪಾದನಾ ಕಾರ್ಮಿಕರು, ವಿದೇಶಿ ಹೂಡಿಕೆಯಂಥ ಸಮಸ್ಯೆಗಳು ಈಗ ಬಗೆಹರಿದಿದ್ದು, ವಿದೇಶಿ ಹೂಡಿಕೆ ಈ ನಿಟ್ಟಿನಲ್ಲಿ ನೆರವಾಗಿದೆ. ಪ್ರಧಾನಿ ಮೋದಿ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಗೆ ಇದು ಹಿನ್ನೆಲೆಯಾಗಿ ನಿಂತಿದೆ ಎಂದು ಗ್ಲೋಬಲ್ ಟೈಮ್ಸ್  ಬಣ್ಣಿಸಿದೆ. ಚೀನಾ ಕಂಪನಿಗಳೂ ಸೇರಿದಂತೆ ಭಾರತದಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ಮಾಡುತ್ತಿರುವ ಕಂಪೆನಿಗಳನ್ನೂ ಲೇಖನದಲ್ಲಿ ಪಟ್ಟಿ ಮಾಡಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com