ಮ್ಯಾನ್ಮಾರ್: ಸೇನಾ ವಿಮಾನದ ಅವಶೇಷ ಅಂಡಮಾನ್ ಸಮುದ್ರದಲ್ಲಿ ಪತ್ತೆ

ನೂರಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಮ್ಯಾನ್ಮಾರ್ ನ ಸೇನಾ ವಿಮಾನದ ಅವಶೇಷ ಇಂದು...
ಯಾಂಗೊನ್ ವಿಮಾನ ನಿಲ್ದಾಣ
ಯಾಂಗೊನ್ ವಿಮಾನ ನಿಲ್ದಾಣ
Updated on
ಮ್ಯಾನ್ಮಾರ್: ನೂರಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಮ್ಯಾನ್ಮಾರ್ ನ ಸೇನಾ ವಿಮಾನದ ಅವಶೇಷ ಇಂದು ಅಂಡಮಾನ್ ಸಮುದ್ರದಲ್ಲಿ ಪತ್ತೆಯಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಮತ್ತು ವಿಮಾನ ಯಾನ ಮೂಲಗಳು ಎಎಫ್ ಪಿ ಸುದ್ದಿ ಸಂಸ್ಥೆಗೆ ತಿಳಿಸಿವೆ.
ದವೈ ನಗರದಿಂದ 218 ಕಿಲೋ ಮೀಟರ್ ದೂರದಲ್ಲಿ ಸಮುದ್ರದಲ್ಲಿ ವ ವಿಮಾನದ ಬಿಡಿ ಭಾಗಗಳು ಸಿಕ್ಕಿದೆ ಎಂದು  ಮೈಯಿಕ್ ನಗರದ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ನೈಂಗ್ ಲಿನ್ ಝಾವ್ ತಿಳಿಸಿದ್ದಾರೆ. ನೌಕಾಪಡೆ ಸಮುದ್ರದಲ್ಲಿ ಶೋಧ ಕಾರ್ಯದಲ್ಲಿ ನಿರತವಾಗಿದೆ.
ಅಂತಾರಾಷ್ಟ್ರೀಯ ಕಾಲಮಾನ ಬೆಳಗ್ಗೆ 7.05ರ  ಹೊತ್ತಿಗೆ ಹಠಾತ್ತನೆ ವಿಮಾನದ ಸಂಪರ್ಕ ಕಡಿತುಕೊಂಡಿತು ಎಂದು ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ.
ವಿಮಾನದ ಹುಡುಕಾಟಕ್ಕೆ ನಾಲ್ಕು ನೌಕಾಪಡೆ ಹಡಗು ಮತ್ತು ಎರಡು ವಿಮಾನವನ್ನು ಕಳುಹಿಸಲಾಯಿತು. ವಿಮಾನ ಕಣ್ಮರೆಯಾಗುವ ಹೊತ್ತಿಗೆ ಮೈಯಿಕ್ ಮತ್ತು ಯಾಂಗೊನ್ ನಗರಗಳ ದಕ್ಷಿಣ ದಿಕ್ಕಿಗೆ  18,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು. 
ದವೈ ಬಂದರು ನಗರವಾಗಿದ್ದು ಮ್ಯಾನ್ಮಾರ್ ನ ವಾಣಿಜ್ಯ ರಾಜಧಾನಿಯಾಗಿದೆ. 
90 ಮಂದಿ ಪ್ರಯಾಣಿಕರು, ಮೈಯಿಕ್ ವಾಯುಪಡೆಯ ಸೇವಾ ಸಿಬ್ಬಂದಿ ಮತ್ತು ಅವರ ಕುಟುಂಬದ ಸದಸ್ಯರೊಬ್ಬರು ಹಾಗೂ ಇತರ 14 ಮಂದಿ ಸಿಬ್ಬಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. 
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಹಾರಾಟ ಆರಂಭಿಸಿದ್ದ ವಿಮಾನ ಇಲ್ಲಿಯವರೆಗೆ 809 ಗಂಟೆಗಳ ಹಾರಾಟ ನಡೆಸಿತ್ತು.
ತಾಂತ್ರಿಕ ದೋಷದಿಂದ ಅಪಘಾತವುಂಟಾಗಿರಬಹುದು ಎಂದು ನಾವು ಭಾವಿಸುತ್ತೇವೆ. ಅಲ್ಲಿ ವಾತಾವರಣ ಅನುಕೂಲಕರವಾಗಿತ್ತು ಎಂದು ಯಂಗೊನ್ ವಿಮಾನ ನಿಲ್ದಾಣ ಸಿಬ್ಬಂದಿ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com