ಇರಾನ್: ಇರಾನ್ ನಲ್ಲಿ ಎರಡು ಭಯೋತ್ಪಾದಕ ದಾಳಿಗಳಾಗಿವೆ. ಸಂಸತ್ ನಲ್ಲಿ ನಡೆದಿರುವ ದಾಳಿಯಲ್ಲಿ ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರೆ, ಅಯಟೋಲ್ಲಾಹ್ ಖೊಮೇನಿ ಸಮಾಧಿಯ ಮತ್ತೊಂದು ದಾಳಿ ನಡೆದಿದೆ.
ಸಂಸತ್ ಒಳಗೆ ನುಗ್ಗಿದ್ದ ಉಗ್ರನೋರ್ವ ಹಾರಿಸಿದ ಗುಂಡು ಭದ್ರತಾ ಸಿಬ್ಬಂದಿಯ ಕಾಲಿಗೆ ತಗುಲಿದ್ದು ಒಟ್ಟು ಮೂವರು ಸಿಬ್ಬಂದಿಗಳಿಗೆ ಗಾಯಗಳಾಗಿದ್ದು ಸಾವಿನ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಇತ್ತೀಚಿನ ವರದಿಗಳ ಪ್ರಕಾರ ಗುಂಡಿನ ದಾಳಿ ನಡೆಸಿರುವ ಉಗ್ರರು ಹಲವರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಂಸತ್ ನಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.