ಮ್ಯಾನ್ಮಾರ್: 116 ಪ್ರಯಾಣಿಕರಿದ್ದ ಸೇನಾ ವಿಮಾನ ಕಣ್ಮರೆ

116 ಮಂದಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಮ್ಯಾನ್ಮಾರ್ ಸೇನಾ ವಿಮಾನ ಇಂದು ಮೈಯಿಕ್ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮ್ಯಾನ್ಮಾರ್: 116 ಮಂದಿಯನ್ನು ಹೊತ್ತು ಸಾಗುತ್ತಿದ್ದ ಮ್ಯಾನ್ಮಾರ್ ಸೇನಾ ವಿಮಾನ ಇಂದು ಮೈಯಿಕ್ ಮತ್ತು ಯೊಂಗೊನ್ ನಗರ ಮಧ್ಯೆ ಕಣ್ಮರೆಯಾಗಿದೆ ಎಂದು ಸೇನಾ ಮುಖ್ಯಸ್ಥರು ಮತ್ತು ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ.
ಇಂದು ಮಧ್ಯಾಹ್ನ 1.35ರ ವೇಳೆಗೆ ಅಂದರೆ ಅಂತಾರಾಷ್ಟ್ರೀಯ ಕಾಲಮಾನ ಬೆಳಗ್ಗೆ 7.05ರ ಹೊತ್ತಿಗೆ  ದವೈ ಪಟ್ಟಣದ ಪಶ್ಚಿಮಕ್ಕೆ 20 ಮೈಲು ದೂರದಲ್ಲಿ ತಲುಪುವ ವೇಳೆಗೆ ಸಂಪರ್ಕ ಕಡಿತುಕೊಂಡಿತು ಎಂದು ಸೇನೆಯ ಕಮಾಂಡರ್ ಇನ್ ಚೀಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. 
ಸೇನಾ ವಿಮಾನದಲ್ಲಿ 105 ಮಂದಿ ಪ್ರಯಾಣಿಕರು ಮತ್ತು 11 ಸಿಬ್ಬಂದಿ ಇದ್ದರು ಎಂದು ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com