ಅಮೆರಿಕದಲ್ಲಿ ಗುಂಡಿನ ದಾಳಿ: ರಿಪಬ್ಲಿಕನ್ ಪಕ್ಷದ ಸಂಸದ ಸೇರಿ ಹಲವರಿಗೆ ಗಾಯ

ಅಮೆರಿಕದ ವರ್ಜೀನಿಯಾದ ಅಲೆಕ್ಸಾಂಡ್ರಿಯಾದಲ್ಲಿ ದುಷ್ಕರ್ಮಿಯೊಬ್ಬ ಬುಧವಾರ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ...
ದಾಳಿ ನಡೆದ ಸ್ಥಳ - ಸಂಸದ ಸ್ಟೀವ್ ಸ್ಕಲೀಸ್
ದಾಳಿ ನಡೆದ ಸ್ಥಳ - ಸಂಸದ ಸ್ಟೀವ್ ಸ್ಕಲೀಸ್
Updated on
ವಾಷಿಂಗ್ಟನ್: ಅಮೆರಿಕದ ವರ್ಜೀನಿಯಾದ ಅಲೆಕ್ಸಾಂಡ್ರಿಯಾದಲ್ಲಿ ದುಷ್ಕರ್ಮಿಯೊಬ್ಬ ಬುಧವಾರ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ರಿಪಬ್ಲಿಕನ್ ಪಕ್ಷದ ಹಿರಿಯ ಸಂಸದ ಸ್ಟೀವ್ ಸ್ಕಲೀಸ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
ಸಂಸದರ ನಡುವಣ ವಾರ್ಷಿಕ ಬೇಸ್‌ಬಾಲ್ ಪಂದ್ಯಕ್ಕಾಗಿ ಅಭ್ಯಾಸ ನಡೆಸುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿದೆ.
ಈ ಬಗ್ಗೆ ರಿಪಬ್ಲಿಕನ್‌ ಪಕ್ಷದ  ಮತ್ತೊಬ್ಬ ಸಂಸದ ಮೊ ಬ್ರೂಕ್ಸ್ ಅವರು ಸಿಎನ್‌ಎನ್‌ ಸುದ್ದಿವಾಹಿನಿಗೆ ಮಾಹಿತಿ ನೀಡಿದ್ದು, ಕನಿಷ್ಠ ಇಬ್ಬರು ಅಧಿಕಾರಿಗಳು ಮತ್ತು ಸಂಸತ್‌ನ ಒಬ್ಬ ಸಿಬ್ಬಂದಿ ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ. ದಾಳಿಕೋರ ಮಧ್ಯವಯಸ್ಸಿನ ಬಿಳಿಯ ವ್ಯಕ್ತಿ ಎಂದು ಅವರು ತಿಳಿಸಿದ್ದಾರೆ.
ಈ ಮಧ್ಯೆ, ವರ್ಜಿನಿಯಾ ಪೊಲೀಸರು ದಾಳಿಕೋರನನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com