ಆಫ್ಘಾನಿಸ್ತಾನದಲ್ಲಿ ಉಗ್ರರಿಂದ ಆತ್ಮಾಹುತಿ ಕಾರ್ ಬಾಂಬ್ ಸ್ಫೋಟ: 20 ಸಾವು, 50 ಗಾಯ

ಆಫ್ಘಾನಿಸ್ತಾನದಲ್ಲಿ ಉಗ್ರರು ಆತ್ಮಾಹುತಿ ಕಾರ್ ಬಾಂಬ್ ಸ್ಫೋಟಿಸಿದ್ದು ಪರಿಣಾಮ 20 ಜನರು ಸಾವನ್ನಪ್ಪಿದ್ದು 50 ಜನರು ಗಂಭೀರ...
ಆತ್ಮಾಹುತಿ ಬಾಂಬ್ ದಾಳಿ(ಸಂಗ್ರಹ ಚಿತ್ರ)
ಆತ್ಮಾಹುತಿ ಬಾಂಬ್ ದಾಳಿ(ಸಂಗ್ರಹ ಚಿತ್ರ)
ಆಫ್ಘಾನಿಸ್ತಾನ: ಆಫ್ಘಾನಿಸ್ತಾನದಲ್ಲಿ ಉಗ್ರರು ಆತ್ಮಾಹುತಿ ಕಾರ್ ಬಾಂಬ್ ಸ್ಫೋಟಿಸಿದ್ದು ಪರಿಣಾಮ 20 ಜನರು ಸಾವನ್ನಪ್ಪಿದ್ದು 50 ಜನರು ಗಂಭೀರ ಗಾಯಗೊಂಡಿದ್ದಾರೆ. 
ಆಫ್ಘಾನಿಸ್ತಾನದ ಹೆಲ್ಮಂಡ್ ನಲ್ಲಿ ಉಗ್ರರು ಈ ದುಷ್ಕೃತ್ಯ ಎಸಗಿದ್ದಾರೆ. ಕಾರ್ ಬಾಂಬ್ ಸ್ಫೋಟಗೊಳ್ಳುತ್ತಿದ್ದಂತೆ ಭದ್ರತಾ ಪಡೆ ಯೋಧರು ಘಟನಾ ಪ್ರದೇಶವನ್ನು ಸುತ್ತುವರಿದಿದ್ದಾರೆ. ಇನ್ನು ಉಗ್ರರಿಗಾಗಿ ಯೋಧರು ಹುಡುಕಾಟ ನಡೆಸುತ್ತಿದ್ದಾರೆ.
ದಾಳಿಯಲ್ಲಿ ಸ್ಥಳದಲ್ಲೇ 20 ಜನರು ಸಾವನ್ನಪ್ಪಿದ್ದು 50 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com