ಬೈರುತ್: ಉತ್ತರ ಸಿರಿಯಾದ ಅಲೆಪ್ಪೊ ನಗರದ ಮಸೀದಿಯೊಂದರ ಮೇಲೆ ವೈಮಾನಿಕ ದಾಳಿ ನಡೆಸಲಾಗಿದ್ದು 42ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.
ಅಲೆಪ್ಪೋದಲ್ಲಿರುವ ಮಸೀದಿಗಳನ್ನು ಗುರಿಯಾಗಿರಿಸಿಕೊಂಡು ಉಗ್ರರು ವೈಮಾನಿಕ ದಾಳಿ ನಡೆಸಿದ್ದು, ಘಟನೆಯಲ್ಲಿ 42 ಮಂದಿ ಸಾವನ್ನಪ್ಪಿ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆಂದು ಸಿರಿಯಾ ಮಾನವ ಹಕ್ಕುಗಳ ಪರಿವೀಕ್ಷಣಾಲಯ ಮಾಹಿತಿ ನೀಡಿದೆ.
ದಾಳಿಯನ್ನು ಹೊಣೆಯನ್ನು ಈ ವರೆಗೂ ಯಾವುದೇ ಉಗ್ರ ಸಂಘಟನೆಗಳು ಹೊತ್ತುಕೊಂಡಿಲ್ಲ. ಮಸೀದಿ ಮೇಲೆ ದಾಳಿ ದಾಳಿ ನಡೆಸಿರುವುದರಿಂದ ಹಲವು ಮಂದಿ ಅವಶೇಷಗಳಡಿ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ದಾಳಿ ನಡೆಸಿದ್ದು ನಾವೇ ಎಂದ ಅಮೆರಿಕ
ವೈಮಾನಿಕ ದಾಳಿ ನಡೆಸಿದ್ದು ನಾವೇ ಎಂದು ಅಮೆರಿಕ ಸೇನಾ ಪಡೆ ಒಪ್ಪಿಕೊಂಡಿದೆ.
ಅಲ್-ಖೈದಾ ಉಗ್ರರು ಸಭೆ ನಡೆಸುವ ಬಗ್ಗೆ ಮಾಹಿತಿ ಮಾಹಿತಿ ತಿಳಿದುಬಂದಿತ್ತು. ಹೀಗಾಗಿ ನಾವು ಆ ಸ್ಥಳದ ಮೇಲೆ ವೈಮಾನಿಕ ದಾಳಿ ನಡೆಸಿದ್ದೆವು. ನಾವು ಯಾವುದೇ ಮಸೀದಿಗಳನ್ನು ಗುರಿ ಮಾಡಿಕೊಂಡು ದಾಳಿ ನಡೆಸಿರಲಿಲ್ಲ ಎಂದು ಸ್ಪಷ್ಟನೆ ನೀಡಿದೆ.