ಪಾಕಿಸ್ತಾನದೊಳಗಿನ ಉಗ್ರರ ಸುರಕ್ಷಿತ ತಾಣಗಳ ಮೇಲೆ ದಾಳಿ: ಇರಾನ್ ಎಚ್ಚರಿಕೆ

ಗಡಿ ಭಾಗಗಳಲ್ಲಿ ದಾಳಿಯನ್ನು ನಡೆಸುತ್ತಿರುವ ಸುನ್ನಿ ಉಗ್ರಗ ವಿರುದ್ಧ ಪಾಕಿಸ್ತಾನ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಸೇನಾ ಪಡೆ...
ಇರಾನ್ ಸಶಸ್ತ್ರ ಪಡೆಯ ಮೇಜರ್ ಜನರಲ್ ಮೊಹಮ್ಮದ್ ಹುಸೇನ್ ಬಗೇರಿ
ಇರಾನ್ ಸಶಸ್ತ್ರ ಪಡೆಯ ಮೇಜರ್ ಜನರಲ್ ಮೊಹಮ್ಮದ್ ಹುಸೇನ್ ಬಗೇರಿ
Updated on: 
ಟೆಹ್ರಾನ್: ಗಡಿ ಭಾಗಗಳಲ್ಲಿ ದಾಳಿಯನ್ನು ನಡೆಸುತ್ತಿರುವ ಸುನ್ನಿ ಉಗ್ರಗ ವಿರುದ್ಧ ಪಾಕಿಸ್ತಾನ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಸೇನಾ ಪಡೆ ಉಗ್ರತಾಣಗಳ ಮೇಲೆ ದಾಳಿ ನಡೆಸಲಿದೆ ಎಂದು ಇರಾನ್ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.
ಇರಾನ್ ನ 10 ಗಡಿ ಭದ್ರತಾ ಯೋಧರನ್ನು ಕಳೆದ ತಿಂಗಳು ಉಗ್ರಗಾಮಿಗಳು ಕೊಂದು ಹಾಕಿದ್ದರು. ಜೈಶ್ ಅಲ್ ಅಡ್ಲ್ ಸುನ್ನಿ ಭಯೋತ್ಪಾದಕ ಗುಂಪು ಆಗಿದ್ದು ಗನ್ ಗಳ ಸಹಾಯದಿಂದ ಪಾಕಿಸ್ತಾನದ ಒಳಗಿನಿಂದ ಭದ್ರತಾ ಯೋಧರನ್ನು ಕೊಂದು ಹಾಕಿತ್ತು. ಇದರಿಂದ ಗಡಿಭಾಗ ಮಾದಕ ವಸ್ತು ಕಳ್ಳಸಾಗಣೆದಾರರು ಮತ್ತು ಪ್ರತ್ಯೇಕತಾವಾದಿ ಉಗ್ರರ ಉಪಟಳದಿಂದ ಅಶಾಂತಿಯ ತಾಣವಾಗಿದೆ.
ಈ ಪರಿಸ್ಥಿತಿ ಮುಂದುವರಿದುಕೊಂಡು ಹೋಗುವುದನ್ನು ನಾವು ನೋಡಲು ಇಚ್ಛಿಸುವುದಿಲ್ಲ ಎಂದು ಇರಾನ್ ಸಶಸ್ತ್ರ ಪಡೆಯ ಮೇಜರ್ ಜನರಲ್ ಮೊಹಮ್ಮದ್ ಹುಸೇನ್ ಬಗೇರಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪಾಕಿಸ್ತಾನದ ಅಧಿಕಾರಿಗಳು ಗಡಿಭಾಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಉಗ್ರರನ್ನು ಬಂಧಿಸಿ ಅವರ ನೆಲೆಗಳನ್ನು ಮುಚ್ಚಬೇಕು ಎಂದು ಹೇಳಿದ್ದಾರೆ.
ಉಗ್ರರ ದಾಳಿ ಹೀಗೆಯೇ ಮುಂದುವರಿದರೆ ಅವರ ಸುರಕ್ಷಿತ ಅಡಗುತಾಣಗಳ ಮೇಲೆ ಎಲ್ಲೆಂದರಲ್ಲಿ ದಾಳಿ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.ಗಡಿಭಾಗದಲ್ಲಿ ಹೆಚ್ಚುವರಿ ಸೇನಾಪಡೆಯನ್ನು ನಿಯೋಜಿಸುವುದಾಗಿ ಪಾಕಿಸ್ತಾನ ಇರಾನ್ ಗೆ ಭರವಸೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com