ಕಾರಿನ ಡಿಕ್ಕಿಯಿಂದ ಹಾರಿ ಜೀವ ಉಳಿಸಿಕೊಂಡ ಅಪಹರಣಕ್ಕೀಡಾಗಿದ್ದ ಮಹಿಳೆ

ಅಪಹರಣಕ್ಕೀಡಾಗಿದ್ದ ಮಹಿಳೆ ಕಾರಿನ ಡಿಕ್ಕಿಯಿಂದ ಹಾರಿ ಜೀವ ಉಳಿಸಿಕೊಂಡಿರುವ ಘಟನೆ ಅಲಬಾಮಾದಲ್ಲಿ ನಡೆದಿದೆ...
ಕಾರಿನಿಂದ ತಪ್ಪಿಸಿಕೊಳ್ಳುತ್ತಿರುವ ಮಹಿಳೆ
ಕಾರಿನಿಂದ ತಪ್ಪಿಸಿಕೊಳ್ಳುತ್ತಿರುವ ಮಹಿಳೆ
ಅಪಹರಣಕ್ಕೀಡಾಗಿದ್ದ ಮಹಿಳೆ ಕಾರಿನ ಡಿಕ್ಕಿಯಿಂದ ಹಾರಿ ಜೀವ ಉಳಿಸಿಕೊಂಡಿರುವ ಘಟನೆ ಅಲಬಾಮಾದಲ್ಲಿ ನಡೆದಿದೆ. 
ಅಕ್ಟೋಬರ್ 30ರಂದು ಮಹಿಳೆಯ ಮನೆಗೆ ನುಗ್ಗಿದ ಆರೋಪಿ ಮಹಿಳೆಯಿಂದ ದುಡ್ಡಿಗೆ ಬೇಡಿಕೆ ಇಟ್ಟಿದ್ದಾನೆ. ಇದಕ್ಕೆ ಮಹಿಳೆ ನಿರಾಕರಿಸಿದ್ದಕ್ಕೆ ಬಲವಂತವಾಗಿ ಆಕೆಯನ್ನು ಎಳೆದು ತಂದು ಕಾರಿನ ಡಿಕ್ಕಿಯಲ್ಲಿ ಅಡಗಿಸಿಟ್ಟಿರುತ್ತಾನೆ. ನಂತರ ಕಾರಿಗೆ ಗ್ಯಾಸ್ ತುಂಬಿಸಲು ಗ್ಯಾಸ್ ಬಂಕ್ ಗೆ ಹೋಗಿದ್ದಾಗ ಸಾಹಸ ಪ್ರದರ್ಶಿಸಿದ ಮಹಿಳೆ ಕಾರಿನ ಡಿಕ್ಕಿಯಿಂದ ಹೊರ ಬಂದು ಅಲ್ಲಿಂದ ಪರಾರಿಯಾಗಿರುತ್ತಾಳೆ. 
ಆತ ಗ್ಯಾಸ್ ಬಂಕ್ ನಲ್ಲಿದ ಅಂಗಡಿಗೆ ಕೆಲ ಸಾಮಾನು ಖರೀದಿಸಲು ಹೋಗಿದ್ದಾಗ ಮಹಿಳೆ ಕಾರಿನಿಂದ ಹೊರಬಂದು ತಪ್ಪಿಸಿಕೊಂಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಗಳನ್ನು ಆಧಾರವಾಗಿಟ್ಟುಕೊಂಡು ಪೊಲೀಸರು ಆರೋಪಿ ತಿಮೋತಿ ಜಬ್ಬರ್ ವ್ಯಾಟ್ ನನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com