ಕಾಬೂಲ್: ಮದುವೆ ಮಂಟಪದ ಎದುರು ಆತ್ಮಹುತಿ ಬಾಂಬ್ ದಾಳಿ, 9 ಸಾವು

ಮದುವೆ ಮಂಟಪದಲ್ಲಿ ರಾಜಕೀಯ ಸಭೆ ನಡೆಯುತ್ತಿದ್ದಾಗ ಭಯೋತ್ಪಾದಕರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು ಈ ದಾಳಿಯಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದಾರೆ...
ಆತ್ಮಾಹುತಿ ದಾಳಿ
ಆತ್ಮಾಹುತಿ ದಾಳಿ
ಕಾಬೂಲ್: ಮದುವೆ ಮಂಟಪದಲ್ಲಿ ರಾಜಕೀಯ ಸಭೆ ನಡೆಯುತ್ತಿದ್ದಾಗ ಭಯೋತ್ಪಾದಕರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು ಈ ದಾಳಿಯಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. 
ಬಾಲ್ಕಾದ ಗೌವರ್ನರ್ ಅಟಾ ಮೊಹಮ್ಮದ್ ನೂರ್ ಬೆಂಬಲಿಗರು ಸಭೆ ನಡೆಸುತ್ತಿದ್ದಾಗ ಆತ್ಮಾಹುತಿ ಬಾಂಬ್ ದಾಳಿಕೋರರು ಒಳಗೆ ಪ್ರವೇಶಿಸಲು ಯತ್ನಿಸಿದ್ದಾರೆ. ಈ ವೇಳೆ ಭದ್ರತಾ ಪಡೆಗಳು ಅವರನ್ನು ಭದ್ರತಾ ಪರೀಕ್ಷೆ ನಡೆಸುತ್ತಿದ್ದ ವೇಳೆ ಉಗ್ರರು ಬಾಂಬ್ ಸ್ಫೋಟಿಸಿಕೊಂಡಿದ್ದಾರೆ. 
ಈ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಹೆಚ್ಚಾಗಿ ಆಫ್ಗಾನ್ ಪೊಲೀಸರು ಮೃತಪಟ್ಟಿರುವುದಾಗಿ ಕಾಬೂಲ್ ಪೊಲೀಸ್ ವಕ್ತಾರ ಅಬ್ದುಲ್ ಬಸೀರ್ ಮುಜಾಯೀದ್ ಹೇಳಿದ್ದಾರೆ. ಇನ್ನು ಆತ್ಮಾಹುತಿ ಬಾಂಬ್ ದಾಳಿಯ ಹೊಣೆಯನ್ನು ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ ಎಂದು ಅಬ್ದುಲ್ ಬಸೀರ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com