ವಾಟ್ಸ್ ಆಪ್ ಗೆ 'ಗುಡ್ ಬೈ' ಹೇಳಿದ ಸಹ ಸಂಸ್ಥಾಪಕ ಬ್ರಿಯಾನ್ ಆಕ್ಟನ್

ಫೇಸ್ ಬುಕ್ ಇಂಕ್ ಮಾಲೀಕತ್ವದ ವಾಟ್ಸ್ ಆಪ್ ನ ಸಹ-ಸಂಸ್ಥಾಪಕ ಬ್ರಿಯಾನ್ ಆಕ್ಟನ್, ವಾಟ್ಸ್ ಆಪ್ ನ್ನು ತೊರೆದಿದ್ದಾರೆ.
ಬ್ರಿಯಾನ್ ಆಕ್ಟನ್
ಬ್ರಿಯಾನ್ ಆಕ್ಟನ್
ಅಮೆರಿಕಾ: ಫೇಸ್ ಬುಕ್ ಇಂಕ್ ಮಾಲೀಕತ್ವದ ವಾಟ್ಸ್ ಆಪ್ ನ ಸಹ-ಸಂಸ್ಥಾಪಕ ಬ್ರಿಯಾನ್ ಆಕ್ಟನ್, ವಾಟ್ಸ್ ಆಪ್ ನ್ನು ತೊರೆದಿದ್ದಾರೆ. ತಾವು ನೂತನ ಸಂಸ್ಥೆಯನ್ನು ಪ್ರಾರಂಭಿಸುವುದಕ್ಕಾಗಿ ಈ ಸಂಸ್ಥೆಯಿಂದ ಹೊರನಡೆಯುತ್ತಿದ್ದೇನೆ ಎಂದು ಆಕ್ಟನ್ ತನ್ನ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಆಕ್ಟನ್ ಎಂಟು ವರ್ಷಗಳ ಕಾಲ ವಾಟ್ಸ್ ಆಪ್ ಸೇವೆಯಲ್ಲಿದ್ದರು, ಫೇಸ್ ಬುಕ್ 2014 ರಲ್ಲಿ  19 ಶತಕೋಟಿ ಡಾಲರ್ ನಗದು ಮತ್ತು ಸ್ಟಾಕ್ ಗಳ ಮೂಲಕ ವಾಟ್ಸ್ ಆಪ್ ನ್ನು ಖರೀದಿಸಿತ್ತು.
ಸ್ಟಾನ್ ಫೋರ್ಡ್ ನ ಹಳೆಯ ವಿದ್ಯಾರ್ಥಿಯಾಗಿದ್ದ ಆಕ್ಟನ್, 2009 ರಲ್ಲಿ ಉಕ್ರೇನ್ ವಲಸೆಗಾರ ಜಾನ್ ಕೌಮ್ ಅವರೊಡನೆ ವಾಟ್ಸ್ ಆಪ್ ಅನ್ನು ಪ್ರಾರಂಭಿಸಿದರು. ಹೀಗೆ ವಾಟ್ಸ್ ಆಪ್ ಅನ್ನು ಪ್ರಾರಂಭಿಸುವ ಮೊದಲು  ಈ ಜೋಡಿಯು ಯಾಹೂದಲ್ಲಿ ಕೆಲಸ ಮಾಡುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com