ವಿಶ್ವಸಂಸ್ಥೆಯು ಜಿ-4 ರಾಷ್ಟ್ರಗಳಿಗೆ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ನೀಡಬೇಕು: ಭೂತಾನ್
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಪುನಾರಚನೆ ಮಾಡಿಸಿ ಅದರಲ್ಲಿ ಶಾಶ್ವತ ಸದಸ್ಯತ್ವ ಸ್ಥಾನ ಗಿಟ್ಟಿಸಿಕೊಳ್ಳಲು ಸತತ ಯತ್ನ ನಡೆಸುತ್ತಿರುವ ಭಾರತದ ಬೆಂಬಲಕ್ಕೆ ಭೂತಾನ್ ನಿಂತಿದ್ದು, ಜಿ-4 ರಾಷ್ಟ್ರಗಳಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ...
ಭೂತಾನ್ ಪ್ರಧಾನಮಂತ್ರಿ ಶೆರಿಂಗ್ ತೊಗ್ಬೆ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ತಿಂಫು (ಭೂತಾನ್): ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಪುನಾರಚನೆ ಮಾಡಿಸಿ ಅದರಲ್ಲಿ ಶಾಶ್ವತ ಸದಸ್ಯತ್ವ ಸ್ಥಾನ ಗಿಟ್ಟಿಸಿಕೊಳ್ಳಲು ಸತತ ಯತ್ನ ನಡೆಸುತ್ತಿರುವ ಭಾರತದ ಬೆಂಬಲಕ್ಕೆ ಭೂತಾನ್ ನಿಂತಿದ್ದು, ಜಿ-4 ರಾಷ್ಟ್ರಗಳಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಾಯಂ ಸದಸ್ಯತ್ವ ಸ್ಥಾನ ನೀಡಬೇಕೆಂದು ಶನಿವಾರ ಹೇಳಿದೆ.
ಭೂತಾನ್ ರಾಷ್ಟ್ರ ಪ್ರಧಾನಮಂತ್ರಿ ಶೆರಿಂಗ್ ತೊಗ್ಬೆ ಮಾತನಾಡಿ, ಬ್ರೆಜಿಲ್, ಜರ್ಮನಿ, ಭಾರತ ಮತ್ತು ಜಪಾನ್ ನಂತಹ ಜಿ-4 ರಾಷ್ಟ್ರಗಳಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಸ್ಥಾನವನ್ನು ಕೊಡಬೇಕು ಎಂದು ಹೇಳಿದ್ದಾರೆ.
ಭದ್ರತಾ ಮಂಡಳಿಯು ವಿಶ್ವ ಬದಲಾವಣೆಯ ವಾಸ್ತವಿಕತೆಯನ್ನು ಪ್ರತಿಬಿಂಬಿಸುತ್ತದೆ. ಹೀಗಾಗಿ ಭದ್ರತಾ ಮಂಡಳಿಯ ಪುನಾರಚನೆಯಾಗದೆಯೇ ವಿಶ್ವಸಂಸ್ಥೆ ಸುಧಾರಣೆಗೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.