ವುಹಾನ್ ಶೃಂಗಸಭೆ: ಪ್ರಧಾನಿ ಮೋದಿಗೆ ವಿಶೇಷ ಆತಿಥ್ಯ, ಭಾರತೀಯ ಶೈಲಿಯ ಚೀನೀಯರ ಮೆನುಕಾರ್ಡ್

ಪ್ರಧಾನಿ ನರೇಂದ್ರ ಮೋದಿ ಅವರ 2 ದಿನಗಳ ಚೀನಾ ಪ್ರವಾಸದ ಹಿನ್ನಲೆಯಲ್ಲಿ ವಿಶೇಷ ಆತಿಥ್ಯ ನೀಡಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು, ಪ್ರಧಾನಿ ಮೋದಿಗೆ ಭಾರತೀಯ ಶೈಲಿಯಲ್ಲಿರುವ ವಿಶೇಷ ಮೆನುಕಾರ್ಡ್ ನೀಡಿದ್ದಾರೆ.
ಚೀನಾ ಸರ್ಕಾರದ ಮೆನುಕಾರ್ಡ್
ಚೀನಾ ಸರ್ಕಾರದ ಮೆನುಕಾರ್ಡ್
ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿ ಅವರ 2 ದಿನಗಳ ಚೀನಾ ಪ್ರವಾಸದ ಹಿನ್ನಲೆಯಲ್ಲಿ ವಿಶೇಷ ಆತಿಥ್ಯ ನೀಡಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು, ಪ್ರಧಾನಿ ಮೋದಿಗೆ ಭಾರತೀಯ ಶೈಲಿಯಲ್ಲಿರುವ ವಿಶೇಷ ಮೆನುಕಾರ್ಡ್ ನೀಡಿದ್ದಾರೆ.
ಹೌದು.. ನಿನ್ನೆ ಚೀನಾಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಚೀನಾದ ವುಹಾನ್ ನಲ್ಲಿ ಬಂದಿಳಿದಿರು. ಅಲ್ಲೇ ಚೀನಾ ಮತ್ತು ಭಾರತದ ನಾಯಕರ ಶೃಂಗಸಭೆ ಏರ್ಪಾಟಾಗಿದ್ದರಿಂದ ಉಭಯ ನಾಯಕರೂ ಅಲ್ಲಿಯೇ ತಂಗಿದ್ದರು. ಇಂದು ಪ್ರಧಾನಿ ಮೋದಿ ಭಾರತಕ್ಕೆ ವಾಪಸ್ ಆಗುವ ಮುನ್ನ ಪ್ರಧಾನಿ ಮೋದಿಗೆ ವಿಶೇಷ ಔತಣ ಕೂಟ ಏರ್ಪಡಿಸಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು, ಪ್ರಧಾನಿ ಮೋದಿಗಾಗಿ ರಚಿಸಿದ್ದ ವಿಶೇಷ ಮೆನುಕಾರ್ಡ್ ಇದೀಗ ಮಾಧ್ಯಮಗಳ ಗಮನ ಸೆಳೆದಿದೆ.
ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷಶ್ರ ಕ್ಸಿ ಜಿನ್ ಪಿಂಗ್ ಪಾಲ್ಗೊಂಡಿದ್ದ ಖಾಸಗಿ ವಿಶೇಷ ಔತಣಕೂಟಕ್ಕಾಗಿ ವಿಶೇಷ ಮೆನುಕಾರ್ಡ್ ಸಿದ್ಧಪಡಿಸಲಾಗಿತ್ತು. ಈ ಮೆನುಕಾರ್ಡ್ ಭಾರತೀಯ ಶೈಲಿಯಲ್ಲಿದ್ದು, ಭಾರತದ ರಾಷ್ಟ್ರಪಕ್ಷಿ ನವಿಲು ಚಿತ್ರವನ್ನು ಹೊಂದಿದ್ದು, ತ್ರಿವರ್ಣಧ್ವಜ ಮಾದರಿಯಲ್ಲಿ ಅದನ್ನು ಸಿದ್ಧಪಡಿಸಲಾಗಿತ್ತು. ಚೀನಾ ಸರ್ಕಾರಿ ಮೂಲಗಳು ತಿಳಿಸಿರುವಂತೆ ಈ ಮೆನುಕಾರ್ಡ್ ರಚನೆ ಸಂಬಂಧ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ವಿಶೇಷ ಆಸಕ್ತಿ ತೋರಿದ್ದರು ಎನ್ನಲಾಗಿದೆ. ಅಲ್ಲದೆ ಔತಣಕೂಟದ ವಿಶೇಷ ಖಾದ್ಯಗಳ ಕುರಿತಾಗಿಯೂ ಮಾಹಿತಿ ಪಡೆದಿದ್ದರು ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com