ಆಫ್ಘಾನ್‌ನಲ್ಲಿ ನಿಲ್ಲದ ಆತ್ಮಾಹುತಿ ಬಾಂಬ್ ದಾಳಿ; ಪ್ರತ್ಯೇಕ ಬಾಂಬ್ ದಾಳಿಯಲ್ಲಿ 72 ಸಾವು!

ಆಫ್ಘಾನಿಸ್ತಾನದಲ್ಲಿನ ಶಿಯಾ ಸಮುದಾಯದ ಮಸೀದಿ ಮೇಲೆ ನಡೆದ ಎರಡು ಪ್ರತ್ಯೇಕ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 72 ಮಂದಿ ದಾರುಣ ಸಾವನ್ನಪ್ಪಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕಾಬೂಲ್: ಆಫ್ಘಾನಿಸ್ತಾನದಲ್ಲಿನ ಶಿಯಾ ಸಮುದಾಯದ ಮಸೀದಿ ಮೇಲೆ ನಡೆದ ಎರಡು ಪ್ರತ್ಯೇಕ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 72 ಮಂದಿ ದಾರುಣ ಸಾವನ್ನಪ್ಪಿದ್ದಾರೆ.
ಆಫ್ಗಾನಿಸ್ತಾನದಲ್ಲಿ ಶುಕ್ರವಾರ ನಡೆದ ಪ್ರತ್ಯೇಕ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಒಟ್ಟಾರೆ 72 ಮಂದಿ ಸಾವನ್ನಪ್ಪಿದ್ದಾರೆ. ಪಾಕ್ಟಿಯಾದ ಗಾರ್ಡೆಜ್ ನಗರದಲ್ಲಿರುವ ಮಸೀದಿಗೆ ಇಬ್ಬರು ಆತ್ಮಾಹುತಿ ಬಾಂಬ್ ದಾಳಿಕೋರರರು ಬುರ್ಕಾ ಧರಿಸಿ ಬಂದು ಬಾಂಬ್ ದಾಳಿ ನಡೆಸಿದ್ದು ಪರಿಣಾಮ 39 ಮಂದಿ ಸಾವನ್ನಪ್ಪಿದ್ದು 80 ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ಪಾಕ್ಟಿಯಾದ ಪೊಲೀಸ್ ಮುಖ್ಯಸ್ಥ ರಾಜ್ ಮೊಹಮ್ಮದ್ ತಿಳಿಸಿದ್ದಾರೆ. 
ಕಾಜ್ವಾ ಹಸನ್ ಮಸೀದಿಯಲ್ಲಿ ಈ ಬಾಂಬ್ ದಾಳಿ ನಡೆದಿದ್ದು ಇದರಲ್ಲಿ ಗಾಯಗೊಂಡಿದ್ದ 20ಕ್ಕೂ ಹೆಚ್ಚು ಮಕ್ಕಳು ಮತ್ತು 50 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com