ಪಾರದರ್ಶಕ ಬಟ್ಟೆ ತೊಟ್ಟ ಈಜಿಪ್ಟ್ ನಟಿ ರನಿಯಾ ಯೂಸೆಫ್‍ಗೆ 5 ವರ್ಷ ಜೈಲು ಶಿಕ್ಷೆ?

ತುಂಡುಡುಗೆ ತೊಟ್ಟು ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದ ಈಜಿಷ್ಟ್ ನಟಿ ರನಿಯಾ ಯೂಸೆಫ್‍ಗೆ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.
ರನಿಯಾ ಯೂಸೆಫ್
ರನಿಯಾ ಯೂಸೆಫ್
ಕೈರೋ: ತುಂಡುಡುಗೆ ತೊಟ್ಟು ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದ ಈಜಿಷ್ಟ್ ನಟಿ ರನಿಯಾ ಯೂಸೆಫ್‍ಗೆ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ. 
ರನಿಯಾ ಯೂಸೆಫ್‍ ಕೈರೋ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನ ಮುಕ್ತಾಯ ಸಮಾರಂಭದಲ್ಲಿ ಸ್ವಿಮ್ ಸೂಟ್ ತರಹದ ಬಟ್ಟೆ ಮೇಲೆ ಬಲೆಯ ರೀತಿಯ ವಸ್ತ್ರ ಧರಿಸಿ ಬಂದಿದ್ದರು. 
ರನಿಯಾ ಯೂಸೆಫ್‍ ರ ಈ ಅವತಾರ ಸಂಪ್ರದಾಯ ಮತ್ತು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವಂತಿದೆ ಎಂದು ವಕೀಲರಾದ ಅಂಬ್ರೋ ಅಬುಸೆಲಮ್ ಮತ್ತು ಸಮೀರ್ ಸಬಾರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. 
ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ನಟಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿದೆ ಎಂದು ಹೇಳಲಾಗುತ್ತಿದೆ. ಇನ್ನು ಇದೇ ರೀತಿ ಧಾರ್ಮಿಕ ಭಾವನೆಗೆ ಕುತ್ತು ತಂದ ಆರೋಪದ ಮೇಲೆ ಗಾಯಕಿಯೊಬ್ಬರಿಗೆ ಈ ಹಿಂದೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com