ಈ ಅಪಾಯಕಾರಿ ಯತ್ನದಿಂದ ಹಲವರು ಗಾಯಗೊಂಡಿದ್ದರೆ, ಈ ಚಾಲೆಂಜ್ ನ್ನು ಸ್ವೀಕರಿಸಿ ನೃತ್ಯ ಮಾಡುತ್ತಿದ್ದಾಗ ಮಹಿಳೆಯ ಹ್ಯಾಂಡ್ ಬ್ಯಾಗ್ ನ್ನು ಕಿಡಿಗೇಡಿಗಳು ದೋಚಿರುವ ಘಟನೆಯೂ ನಡೆದಿದೆ. ಈ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಪೊಲೀಸರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ತಲೆನೋವು ಎದುರಾಗಿದೆ. ಭಾರತದಲ್ಲೂ ಮುಂಬೈ, ಉತ್ತರ ಪ್ರದೇಶ, ಬೆಂಗಳೂರು ನಗರಗಳ ಪೊಲೀಸರು ಕೀಕೀ ಡ್ಯಾನ್ಸ್ ಚಾಲೆಂಜ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಈ ರೀತಿಯ ಯತ್ನಗಳನ್ನು ಮಾಡದಂತೆ ಜನರಲ್ಲಿ ಮನವಿ ಮಾಡುತ್ತಿದ್ದಾರೆ.