ವಿದೇಶ

ಜಿ-7 ನಾಯಕರ ಪೋಟೋ ವೈರಲ್: ಟ್ರಂಪ್ ವಿವರಣೆ

ಜಿ-7 ರಾಷ್ಟ್ರಗಳ ಶೃಂಗಸಭೆ ವೇಳೆಯಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಜರ್ಮನಿಯ ಛಾನ್ಸಲರ್ ಏಂಜೆಲಾ ಮಾರ್ಕೆಲ್ ಅವರ ದೇಹಭಾಷೆಯ ಪೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ಇವರಿಬ್ಬರ ನಡುವೆ ಅತಿ ಸಲುಗೆ ಇರುವಂತೆ ಈ ಪೋಟೋದಲ್ಲಿ ಕಂಡುಬಂದಿತ್ತು.

ಜಿ-7 ನಾಯಕರ ಪೋಟೋ ವೈರಲ್: ಟ್ರಂಪ್ ವಿವರಣೆ
ಜಿ-7 ನಾಯಕರ ಚಿತ್ರ
Published On :

ಸೆಂತೊಸಾ: ಜಿ-7 ರಾಷ್ಟ್ರಗಳ ಶೃಂಗಸಭೆ ವೇಳೆಯಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಜರ್ಮನಿಯ ಛಾನ್ಸಲರ್ ಏಂಜೆಲಾ ಮಾರ್ಕೆಲ್ ಅವರ ದೇಹಭಾಷೆಯ ಪೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗಿತ್ತು. ಇವರಿಬ್ಬರ ನಡುವೆ ಅತಿ ಸಲುಗೆ ಇರುವಂತೆ ಈ ಪೋಟೋದಲ್ಲಿ ಕಂಡುಬಂದಿತ್ತು.

ಪೋಟೋದಲ್ಲಿರುವಂತೆ ಡೊನಾಲ್ಡ್ ಟ್ರಂಪ್, ಕೆಳಗಡೆಯ ಕುರ್ಚಿಯೊಂದರ ಮೇಲೆ ಕೈ ಕಟ್ಟಿ ಕುಳಿತಿದ್ದು, ಮಾರ್ಕೆಲ್ ನಿಂತಿದ್ದಾರೆ. ವಿವಿಧ ರಾಷ್ಟ್ರಗಳ ಮುಖಂಡರು ಸಹ ನಿಂತಿದ್ದು, ಟ್ರಂಪ್ ಅವರ ಕಣ್ಣುಗಳು ಹೊಳೆಯುವಂತೆ ಭಾಸವಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆದಿತ್ತು.

ಸಿಂಗಾಪುರದಲ್ಲಿ ಸೆಂತೊಸಾದಲ್ಲಿಂದು ಈ ಪೋಟೋ ಕುರಿತಂತೆ ಮಾತನಾಡಿದ ಡೊನಾಲ್ಡ್ ಟ್ರಂಪ್,  ಜಿ-7 ಉತ್ತಮ ಸ್ನೇಹಿತರಾಗಿದ್ದು, ಕಳೆದ ವಾರ ಉತ್ತಮ ಮಾತುಕತೆ ನಡೆದಿದೆ. ಆ ರಾಷ್ಟ್ರಗಳ ನಾಯಕರಿಂದ ನಾವೆಲ್ಲರೂ ಅನುಕೂಲ ಪಡೆದುಕೊಂಡಿರುವುದಾಗಿ ತಿಳಿಸಿದರು.

ಶೃಂಗಸಭೆ ಗುಂಪಿನ ಪಠ್ಯಕ್ಕಾಗಿ ನಾಯಕರು ಕಾಯುತ್ತಿದ್ದರು, ಹಾಗೆಯೇ ಮಾತನಾಡುತ್ತಿದ್ದೆವು. ಯಾವುದೇ ಸಂಬಂಧವಿಲ್ಲದ ವಿಷಯದ ಕುರಿತಂತೆ ಎಲ್ಲಾ ನಾಯಕರು ಮಾತನಾಡುತ್ತಿದ್ದೇವು. ಜಸ್ಟಿನ್ ಹಾಗೂ ಮಾರ್ಕೆಲ್ ಅವರೊಂದಿಗೆ ನಾನು ಉತ್ತಮ ಸಂಬಂಧ ಹೊಂದಿದ್ದೇನೆ. ಆದರೆ, ಜರ್ಮನಿ ಜಿಡಿಪಿಯ ಶೇ. 1 ರಷ್ಟನ್ನು ನ್ಯಾಟೋಗೆ ನೀಡುತ್ತದೆ ಎಂದು ಟ್ರಂಪ್ ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.