ಟರ್ಕಿ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ರೆಸಿಪ್ ತಯ್ಯಿಪ್ ಎರ್ಡೋಗನ್ ಪುನರಾಯ್ಕೆ
ಟರ್ಕಿ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ರೆಸಿಪ್ ತಯ್ಯಿಪ್ ಎರ್ಡೋಗನ್ ಪುನರಾಯ್ಕೆ

ಟರ್ಕಿ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ರೆಸಿಪ್ ತಯ್ಯಿಪ್ ಎರ್ಡೋಗನ್ ಪುನರಾಯ್ಕೆ

ಟರ್ಕಿಯ ಹಾಲಿ ಅಧ್ಯಕ್ಷ ರೆಸಿಪ್ ತಯ್ಯಿಪ್ ಎರ್ಡೊಗನ್ ಮತ್ತೊಂದು ಅವಧಿಗೆ ಆಯ್ಕೆಯಾಗಿದ್ದಾರೆ.
ಇಸ್ತಾನ್ಬುಲ್: ಟರ್ಕಿಯ ಹಾಲಿ ಅಧ್ಯಕ್ಷ ರೆಸಿಪ್ ತಯ್ಯಿಪ್ ಎರ್ಡೊಗನ್ ಮತ್ತೊಂದು ಅವಧಿಗೆ ಆಯ್ಕೆಯಾಗಿದ್ದಾರೆ. 
ಚುನಾವಣಾ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗುವುದಕ್ಕೂ ಮುನ್ನವೇ ಎರ್ಡೋಗನ್ ತಮ್ಮ ಗೆಲುವನ್ನು ಘೋಷಿಸಿದ್ದರು. ಈ ಬಗ್ಗೆ ಅಲ್ಲಿನ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಚುನಾವಣಾ ಆಯೋಗ ಫಲಿತಾಂಶವನ್ನು ತಿರುಚಿದೆ ಎಂದು ಆರೋಪಿಸಿವೆ. 
ಕಳೆದ ಬಾರಿಯ ಚುನಾವಣೆಯಲ್ಲಿಯೂ ವಿರೋಧಪಕ್ಷಗಳೆದುರು ಅತ್ಯಂತ ಕಡಿಮೆ ಅಂತರದಿಂದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು.  ಈ ಬಾರಿಯ ಚುನಾವಣೆಯಲ್ಲಿ ರಿಪಬ್ಲಿಕನ್ ಪೀಪಲ್ಸ್ ಪಕ್ಷದಿಂದ ಎರ್ಡೊಗನ್ ವಿರುದ್ಧ ಸ್ಪರ್ಧಿಸಿದ್ದ ಮುಹರ್ರೆಮ್ ಇನ್ಸ್ ಸೋತಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com