

ಇಸ್ಲಾಮಾಬಾದ್: ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಭಾರತ ನಿರಂತವಾಗಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದ್ದು, ಭಾರತದ ಉಪ ಹೈ ಕಮಿಷನರ್ ಜೆ. ಪಿ. ಸಿಂಗ್ ಅವರಿಗೆ ಪಾಕಿಸ್ತಾನ ಸಮನ್ಸ್ ಜಾರಿಗೊಳಿಸಿದೆ.
ಬಿಂಬರ್ ಮತ್ತು ಸಾಮಹಿನಿ ವಲಯದಲ್ಲಿ ನಿನ್ನೆ ದಿನ ಭಾರತೀಯ ಸೇನಾ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿರುವುದು ಖಂಡನಾರ್ಹವಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರ ಅಧಿಕಾರಿ ಮೊಹಮ್ಮದ್ ಪೈಸಲ್,ಆರೋಪಿಸಿದ್ದು, ಸಿಂಗ್ ಅವರಿಗೆ ಸಮನ್ಸ್ ಜಾರಿ ಗೊಳಿಸಿದ್ದಾರೆ.
ಭಾರತದಿಂದ ದಾಳಿಯಿಂದ ಹಲವು ನಾಗರಿಕರು ಹತ್ಯೆಯಾಗಿದ್ದು, ಅವರ ಹೆಂಡತಿ, ಮಕ್ಕಳು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಭಾರತ 1970ರ ಕದನ ವಿರಾಮ ಉಲ್ಲಂಘಿಸಿದ್ದು, 2017ರಿಂದ ಸತತವಾಗಿ ಅಪ್ರಚೋದಿತ ಗುಂಡಿನ ದಾಳಿ ನಡೆಯುತ್ತಿದೆ ಎಂದು ಮೊಹಮ್ಮದ್ ಪೈಸಲ್ ಆರೋಪಿಸಿದ್ದಾರೆ.
2003ರ ಕದನ ವಿರಾಮ ಒಪ್ಪಂದವನ್ನು ಗೌರವಿಸುವಂತೆ ಹಾಗೂ ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಶಾಂತಿ ಕಾಪಾಡುವಂತೆ ಪಾಕಿಸ್ತಾನ ಭಾರತವನ್ನು ಆಗ್ರಹಿಸಿದೆ.