

ಬೀಜಿಂಗ್ : ಈ ವರ್ಷದ ಚೀನಾ ರಕ್ಷಣಾ ಬಜೆಟ್ ನಲ್ಲಿ ಶೇ.8.1ರಷ್ಟು ಹೆಚ್ಚಳವಾಗಿದೆ. ಭಾರತಕ್ಕಿಂತ ಮೂರು ಪಟ್ಟು ಹೆಚ್ಚು 175 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ವೆಚ್ಚಮಾಡಲಾಗುತ್ತಿದೆ.
ಚೀನಾ ಸೇನೆಯನ್ನು ಅತ್ಯಾಧುನಿಕ ರೀತಿಯಲ್ಲಿ ಸಜ್ಜುಗೊಳಿಸುವ ನಿಟ್ಟಿನಲ್ಲಿ ದೊಡ್ಡ ಪ್ರಮಾಣದಲ್ಲಿ ಖರ್ಚು ಮಾಡಲಾಗುತ್ತಿದೆ. ಕಳೆದ ವರ್ಷ ಸೇನೆಗಾಗಿ ಚೀನಾ ಶೇ.7 ರಷ್ಟು ಹಣವನ್ನು ಮೀಸಲಿಟ್ಟಿತ್ತು. ಆದರೆ, ಈ ಬಾರಿ ಶೇ. 8.1 ರಷ್ಟು ಹೆಚ್ಚು ವೆಚ್ಚ ಮಾಡುವುದಾಗಿ ಘೋಷಿಸಿದೆ.
ರಾಷ್ಟ್ರೀಯ ಜನತಾ ಕಾಂಗ್ರೆಸ್ - ಎನ್ ಪಿಸಿಗೆ ಸಲ್ಲಿಸಿದ್ದ ಬಜೆಟ್ ವರದಿಯಲ್ಲಿ ಈ ಮಾಹಿತಿ ಇದ್ದು, 2018ರ ರಕ್ಷಣಾ ಬಜೆಟ್ 1.11 ಟ್ರಿಲಿಯನ್ ಯೆನ್ ಅಂದರೆ 175 ಬಿಲಿಯನ್ ಡಾಲರ್ ನಷ್ಟಿದೆ.