ಫ್ರಾನ್ಸ್: ಸೂಪರ್ ಮಾರ್ಕೆಟ್‌ನಲ್ಲಿ ಬಂದೂಕುಧಾರಿಯಿಂದ ದಾಳಿ; ಇಬ್ಬರ ಸಾವು

ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದನ ಸಂಘಟನೆಗೆ ಸೇರಿದ ಬಂದೂಕುಧಾರಿಯೊಬ್ಬ ಫ್ರಾನ್ಸ್ ನ ಟ್ರೆಬ್ಸ್ ನ ಸೂಪರ್ ಮಾರ್ಕೆಟ್ ವೊಂದಕ್ಕೆ ನುಗ್ಗಿದ್ದು ಅಲ್ಲಿದ್ದ...
ಫ್ರಾನ್ಸ್ ಭದ್ರತಾ ಪಡೆ
ಫ್ರಾನ್ಸ್ ಭದ್ರತಾ ಪಡೆ
ಟೌಲೌಸ್(ಫ್ರಾನ್ಸ್): ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದನ ಸಂಘಟನೆಗೆ ಸೇರಿದ ಬಂದೂಕುಧಾರಿಯೊಬ್ಬ ಫ್ರಾನ್ಸ್ ನ ಟ್ರೆಬ್ಸ್ ನ ಸೂಪರ್ ಮಾರ್ಕೆಟ್ ವೊಂದಕ್ಕೆ ನುಗ್ಗಿದ್ದು ಅಲ್ಲಿದ್ದ ಗ್ರಾಹಕರನ್ನು ಒತ್ತೆಯಾಳಾಗಿಸಿಕೊಂಡಿದ್ದಾನೆ. 
ಇನ್ನು ಸೂಪರ್ ಮಾರ್ಕೆಟ್ ನಲ್ಲಿ ಇಬ್ಬರು ಒತ್ತೆಯಾಳುಗಳ ಹತ್ಯೆಯಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. 
ಟ್ರೆಬ್ಸ್ ಮತ್ತು ಕಾರ್ಕಸ್ಸೊನೆ ಎರಡು ಕಡೆ ಇಂತಹದ್ದೆ ಘಟನೆ ನಡೆದಿದ್ದು ಈ ಎರಡು ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿವೆ. ಇನ್ನು ಕಾರ್ಕಸ್ಸೊನೆಯಲ್ಲಿ ಬಂದೂಕುಧಾರಿಯೊಬ್ಬ ಓರ್ವ ಪೊಲೀಸ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. 
ಇದೊಂದು ಭಯೋತ್ಪಾದಕ ದಾಳಿ ಎಂದು ಫ್ರೆಂಚ್ ಮಾಧ್ಯಮಗಳು ವರದಿ ಮಾಡಿವೆ. 
ಕಳೆದ ವರ್ಷ ಮೇನಲ್ಲಿ ಇಮ್ಯಾನ್ಯುವೆಲ್ ಮ್ಯಾಕ್ರೋನ್ ಫ್ರಾನ್ಸ್ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಇದು ಮೊದಲ ಭಯೋತ್ಪಾದಕ ದಾಳಿಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com