ಹವಾನಾ(ಕ್ಯೂಬಾ): ಹವಾನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಬೋಯಿಂಗ್ 737 ಕ್ಯೂಬಾ ಏರ್ಲೈನ್ ಗೆ ಸೇರಿದ ವಿಮಾನವು ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ..ಅಪಘಾತಕ್ಕೀಡಾದ ವಿಮಾನದಲ್ಲಿ 113 ಪ್ರಯಾಣಿಕರಿದ್ದರೆನ್ನಲಾಗಿದೆ ಆದರೆ ಸಾವುನೋವುಗಳ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಕ್ಯೂಬಾ ಮಾದ್ಯಮ ಪ್ರಕಟಣೆ ತಿಳಿಸಿದೆ..ಇದೇ ವೇಳೆ ಅಪಘಾತ ನಡೆದ ಸ್ಥಳಕ್ಕೆ ಅಗ್ನಿಶಾಮಕ ದಳ ಸೇರಿ ತುರ್ತು ಕಾರ್ಯಪಡೆಯನ್ನು ಕಳಿಸಲಾಗಿದೆ. .ತನ್ನ ಹೆಸರನ್ನು ಹೇಳಲಿಚ್ಚಿಸದ ಮಿಲಿಟರಿ ಅಧಿಕಾರಿಯೊಬ್ಬರು ಕ್ಯೂಬಾನಾ ವಿಮಾನ ಅಪಘಾತದಲ್ಲಿ ಮೂವರು ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದೆ ಎಂದಿದ್ದಾರೆ..ಆದರೆ ಅಪಘಾತದಿಂದ ಅಪಾಯಕ್ಕೊಳಗಾದ ಪ್ರಯಾಣಿಕರ ನಿಖರ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ ಎಂಬುದಾಗಿ ಮಾದ್ಯಮ ವರದಿ ತಿಳಿಸಿದೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics