ಅಡ ಇಟ್ಟಿರುವ ಲಂಡನ್ ಮನೆಯಿಂದ ವಿಜಯ್ ಮಲ್ಯ ಹೊರಕ್ಕೆ?

ಭಾರತದ ಬ್ಯಾಂಕ್ ಗಳಿಗೆ ಸಾಲ ಮರುಪಾವತಿ ಮಾಡಬೇಕಿರುವ ವಿಜಯ್ ಮಲ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಅಡ ಇಟ್ಟಿರುವ ಲಂಡನ್ ಮನೆಯಿಂದ ವಿಜಯ್ ಮಲ್ಯ ಹೊರಕ್ಕೆ?
ಅಡ ಇಟ್ಟಿರುವ ಲಂಡನ್ ಮನೆಯಿಂದ ವಿಜಯ್ ಮಲ್ಯ ಹೊರಕ್ಕೆ?
ಬ್ರಿಟನ್: ಭಾರತದ ಬ್ಯಾಂಕ್ ಗಳಿಗೆ ಸಾಲ ಮರುಪಾವತಿ ಮಾಡಬೇಕಿರುವ ವಿಜಯ್ ಮಲ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 
ಈ ಬಾರಿ ಸ್ವಿಸ್ ಬ್ಯಾಂಕ್ ಬ್ರಿಟನ್ ಹೈಕೋರ್ಟ್ ಮೆಟ್ಟಿಲೇರಿದ್ದು, ಲಂಡನ್ ನ ರೀಜೆಂಟ್ ಪಾರ್ಕ್ ನಲ್ಲಿರುವ ಬಹುಕೋಟಿ (ಮಲ್ಟಿ ಮಿಲಿಯನ್) ಮ್ಯಾನ್ಷನ್ ನಿಂದ ವಿಜಯ್ ಮಲ್ಯ ಅವರನ್ನು ಹೊರಹಾಕುವುದಕ್ಕೆ ಅನುಮತಿ ನೀಡಬೇಕೆಂದು ಕೋರಿದೆ. 
ರೀಜೆಂಟ್ ಪಾರ್ಕ್ ನಲ್ಲಿರುವ ಮಲ್ಟಿ ಮಿಲಿಯನ್ ಮ್ಯಾನ್ಷನ್ ನ್ನು ವಿಜಯ್ ಮಲ್ಯ ಅಡ ಇಟ್ಟಿದ್ದು, 2012 ರಲ್ಲಿ 20.4 ಮಿಲಿಯನ್ ಪೌಂಡ್ ಗಳಷ್ಟು (195 ಕೋಟಿ ರೂಪಾಯಿ) ಗಳಷ್ಟು ಹಣವನ್ನು ಸಾಲ ಪಡೆದಿದ್ದು 5 ವರ್ಷಗಳಲ್ಲಿ ಮರುಪಾವತಿ ಮಾಡಬೇಕಿತ್ತು. ಆದರೆ ಈ ವರೆಗೂ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ವಿಜಯ್ ಮಲ್ಯ ಅವರನ್ನು ಮ್ಯಾನ್ಷನ್ ನಿಂದ ಹೊರಹಾಕಲು ಅನುಮತಿ ನೀಡಬೇಕೆಂದು ಸ್ವಿಸ್ ಬ್ಯಾಂಕ್ ಬ್ರಿಟನ್ ಕೋರ್ಟ್ ಮೆಟ್ಟಿಲೇರಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com