ಉಗ್ರ ಬುರ್ಹಾನ್ ವನಿ ಅಂಚೆ ಚೀಟಿ ಬಿಡುಗಡೆ ಮಾಡಿದ ಪಾಕ್

ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಪಡೆಯಿಂದ ಹತನಾಗಿದ್ದ ಭಯೋತ್ಪಾದಕ ಬುರ್ಹಾನ್ ವನಿ ಪರವಾಗಿ...
ಬುರ್ಹಾನ್ ವನಿ
ಬುರ್ಹಾನ್ ವನಿ
ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಪಡೆಯಿಂದ ಹತನಾಗಿದ್ದ ಭಯೋತ್ಪಾದಕ ಬುರ್ಹಾನ್ ವನಿ ಪರವಾಗಿ ಮಾತನಾಡುವ ಪಾಕಿಸ್ತಾನ ಈ ಬಾರಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಉಗ್ರನ  ಪೋಸ್ಟಲ್ ಸ್ಟ್ಯಾಂಪ್‌ ಬಿಡುಗಡೆ ಮಾಡಿ ಗೌರವ ಸಲ್ಲಿಸಿದೆ.
'ಕಾಶ್ಮೀರ ಹುತಾತ್ಮರ ದಿನ'ದಂದು ಪಾಕಿಸ್ತಾನ 20 ಪೋಸ್ಟಲ್ ಸ್ಟ್ಯಾಂಪ್‌ಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಉಗ್ರ ಬುರ್ಹಾನ್ ವನಿ ಸಹಿತ ಹಲವು ಉಗ್ರರನ್ನು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹುತಾತ್ಮರಂತೆ ಬಿಂಬಿಸಲಾಗಿದೆ. ಇದರೊಂದಿಗೆ ಪಾಕಿಸ್ತಾನ ನೂತನ ಪ್ರಧಾನಿ ಇಮ್ರಾನ್ ಖಾನ್‌ ಅವರ ನೈಜ ದರ್ಶನವಾಗಿದ್ದು, ಪಾಕ್ ನ ಇಬ್ಬಗೆ ನೀತಿ ಬಯಲಾಗಿದೆ.
ಬುರ್ಹಾನ್ ವನಿ ಚಿತ್ರವಿರುವ ಅಂಚೆ ಚೀಟಿಯಲ್ಲಿ 'ಸ್ವಾತಂತ್ರ್ಯ ಐಕಾನ್' ಎಂದು ಬರೆಯಲಾಗಿದ್ದು, ಇತರೆ ಅಂಚೆ ಚೀಟಿಗಳಲ್ಲೂ ಹತ್ಯೆಯಾದ ಉಗ್ರರ ಫೋಟೊಂದಿಗೆ ರಾಸಾಯನಿಕ ಶಸ್ತ್ರಾಸ್ತ್ರದ ಬಳಕೆ, ಪೆಲೆಟ್ ಗನ್ ಬಳಕೆ ಹಾಗೂ ಸಾಮೂಹಿಕ ಸಮಾಧಿ ಎಂಬ ಶೀರ್ಷಿಕೆಗಳನ್ನು ಬಳಸಲಾಗಿದೆ.
22 ವರ್ಷದ ಉಗ್ರ ಬುರ್ಹಾನ್ ವನಿಯನ್ನು 2016, ಜುಲೈ 8ರಂದು ಭಾರತೀಯ ಸೇನೆ ಎನ್ ಕೌಂಟರ್ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com