ಪುಟಿನ್ ಭೇಟಿ ವೇಳೆ 'ರಕ್ಷಣಾ ಒಪ್ಪಂದ' ಕುರಿತ ನಿರ್ಧಾರ ಭಾರತಕ್ಕೆ ಬಿಟ್ಟಿದ್ದು: ರಷ್ಯಾ

ವ್ಲಾದಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ 'ರಕ್ಷಣಾ ಒಪ್ಪಂದ' ಕುರಿತ ನಿರ್ಧಾರ ಭಾರತಕ್ಕೆ ಬಿಟ್ಟಿದ್ದು ಎಂದು ರಷ್ಯಾ ಶನಿವಾರ ಹೇಳಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನ್ಯೂಯಾರ್ಕ್: ವ್ಲಾದಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ 'ರಕ್ಷಣಾ ಒಪ್ಪಂದ' ಕುರಿತ ನಿರ್ಧಾರ ಭಾರತಕ್ಕೆ ಬಿಟ್ಟಿದ್ದು ಎಂದು ರಷ್ಯಾ ಶನಿವಾರ ಹೇಳಿದೆ. 
ಅಕ್ಟೋಬರ್ 4-5 ರಂದು 19ನೇ ಇಂಡೋ-ರಷ್ಯನ್ ಶೃಂಗಸಭೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಪುಟಿನ್ ಅವರು ಭಾರತಕ್ಕೆ ಆಗಮಿಸುತ್ತಿದ್ದಾರೆ. ರಾಜಧಾನಿ ದೆಹಲಿಗೆ ಆಗಮಿಸುವ ಪುಟಿನ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೇಟಿ ಮಾಡಲಿದ್ದು, ಈ ವೇಳೆ ಮಹತ್ವದ ಮಾತುಕತೆ ನಡೆಸಲಿದ್ದಾರೆಂದು ಹೇಳಲಾಗುತ್ತಿದೆ. 
ಪುಟಿನ್ ಭಾರತ ಭೇಟಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಷ್ಯಾ ವಿದೇಶಾಂಗ ಸಚಿವ, ಯಾವ ರೀತಿಯ ಶಸ್ತ್ರಾಸ್ತ್ರಗಳು ಬೇಕು ಹಾಗೂ 2015ರಲ್ಲಿ ನಡೆದಿರುವ ಸೇನಾ ಒಪ್ಪಂದಗಳನ್ನು ಹೇಗೆ ಮುಂದುವರೆಸಬೇಕೆಂಬ ನಿರ್ಧಾರಗಳನ್ನು ಭಾರತ ತೆಗೆದುಕೊಳ್ಳಬೇಕಿದೆ ಎಂದು ಹೇಳಿದ್ದಾರೆ. 
ಇತರೆ ಒಪ್ಪಂದಗಳ ಕುರಿತಂತೆ ಯಾವುದೇ ರೀತಿಯ ಕಾಲಾವಕಾಶ ಹಾಗೂ ಮುಂದೂಡುವಿಕೆಯ ಕುರಿತು ನನಗೆ ಯಾವುದೇ ರೀತಿಯ ಮಾಹಿತಿಗಳಿಲ್ಲ. ದೇಶ ಮುಂದುವರೆಯುವ ಹೇಗೆ ಹಾಗೂ ದೇಶಕ್ಕೆ ಯಾವ ರೀತಿಯ ಶಸ್ತ್ರಾಸ್ತ್ರಘಲ ಅಗತ್ಯವಿದೆ ಎಂಬುದರ ಕುರಿತು ಭಾರತ ಸಾರ್ವಭೌಮ ನಿರ್ಧಾರತ ತೆಗೆದುಕೊಳ್ಳುತ್ತದೆ ಎಂಬುದು ನನಗೆ ತಿಳಿದಿದೆ ಎಂದು ತಿಳಿಸಿದ್ದಾರೆ. 
ಗೋವಾದಲ್ಲಿ 2016ರ ಅಕ್ಟೋಬರ್ ತಿಂಗಳಿನಲ್ಲಿ ನಡೆದಿದ್ದ ಶೃಂಗಸಭೆಯಲ್ಲಿ ಮೋದಿ-ಪುಟಿನ್ ಮಧ್ಯೆ ನಡೆದ ಮಹತ್ವದ ಮಾತುಕತೆ ವೇಳೆ ಎಸ್-400 ಕ್ಷಿಪಣಿ ವ್ಯವಸ್ಥೆಗೆ ಎರಡು ದೇಶಗಳು ಒಪ್ಪಿಗೆ ನೀಡಿತ್ತು. ಮಾತುಕತೆ ವೇಳೆ ಪ್ರಧಾನಿ ಮೋದಿಯವರು ರೂ.39,000 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದ್ದರು. 
400 ಕಿ.ಮೀ. ದೂರದಲ್ಲಿರುವ ಮತ್ತು 30 ಕಿ.ಮೀ ಎತ್ತರದಿಂದ ದಾಳಿಗೆ ಚಿಮ್ಮಿಬರುತ್ತಿರುವ ಶತ್ರುಪಡೆಯ ಬಾಂಬರ್​ಗಳು, ಯುದ್ಧವಿಮಾನ, ಕ್ಷಿಪಣಿ, ಡ್ರೋನ್, ಗೂಢಚರ್ಯು ವಸ್ತುಗಳನ್ನು ಹೊಡೆದುರುಳಿಸಬಲ್ಲ ಶಕ್ತಿ ಎಸ್- 400ಗೆ ಇದೆ. ಜತೆಗೆ ಆಧುನಿಕ ರೆಡಾರ್​ಗಳ ಸಹಾಯದಿಂದ ತನ್ನ ರಕ್ಷಣೆಯನ್ನು ಕೂಡ ಮಾಡಿಕೊಳ್ಳಬಲ್ಲ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com