ಕೊಲೊಂಬೊದಲ್ಲಿನ ಸೇಂಟ್ ಅಂತೋನಿ ಚರ್ಚ್, ಪಶ್ಚಿಮ ಕರಾವಳಿ ಪಟ್ಟಣವಾದ ನೆಗೋಂಬೊದಲ್ಲಿರುವ ಸೇಂಟ್ ಸೆಬಾಸ್ಟಿಯನ್ಸ್ ಚರ್ಚ್ ಮತ್ತು ಪೂರ್ವದ ಬ್ಯಾಟಿಕೊಲೊದಲ್ಲಿರುವ ಮತ್ತೊಂದು ಚರ್ಚ್ನಲ್ಲಿ ಸ್ಪೋಟ ಸಂಬವಿಸಿದೆ. ಅಲ್ಲದೆ ಪಂಚತಾರಾ ಹೋಟೆಲುಗಳಾದ ಶಾಂಗ್ರಿಲಾ, ಸಿನ್ನಮೋನ್ ಗ್ರಾಂಡ್ ಮತ್ತು ಕಿಂಗ್ಸ್ ಬರಿ ಗಳನ್ನು ಗುರಿಯಾಗಿಸಿಕೊಂಡು ಸ್ಪೋಟ ನಡೆದಿತ್ತು.
"ನಮ್ಮ ಚರ್ಚ್ ಗಳ ಮೇಲೆ ಬಾಂಬ್ ದಾಳಿಯಾಗಿದೆ, ದಯಮಾಡಿ ಬಂದು ಸಹಾಯ ಮಾಡಿ" ಎಂದು ಪಶ್ಚಿಮದ ಕರಾವಳಿ ಪಟ್ಟಣವಾದ ನೆಗೋಂಬೊದಲ್ಲಿನ ಸೇಂಟ್ ಸೆಬಾಶಿಷಿಯನ್ ಚರ್ಚ್ ನ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಳ್ಳಲಾಗಿದೆ.