ಮಾಜಿ ಪೋರ್ನ್ ಸ್ಟಾರ್ ಮಿಯಾ ಖಲೀಫ್ 'ಭಾರತೀಯ ಮುಸ್ಲಿಂ' ಟ್ವೀಟ್, ಪಾಕ್ ಮಾಜಿ ಸಚಿವನಿಗೆ ಮುಖಭಂಗ!

ಮಾಜಿ ಪೋರ್ನ್ ಸ್ಟಾರ್ ಮಿಯಾ ಖಲೀಫ್ ಭಾರತೀಯ ಮುಸ್ಲಿಂ ಎಂದು ಟ್ವೀಟ್ ಮಾಡಿದ್ದ ಪಾಕಿಸ್ತಾನ ಮಾಜಿ ಸಚಿವನಿಗೆ ಟ್ವೀಟರಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ.
ರೆಹಮಾನ್ ಮಲಿಕ್-ಮಿಯಾ ಖಲೀಫ್
ರೆಹಮಾನ್ ಮಲಿಕ್-ಮಿಯಾ ಖಲೀಫ್

ಇಸ್ಲಾಮಾಬಾದ್: ಮಾಜಿ ಪೋರ್ನ್ ಸ್ಟಾರ್ ಮಿಯಾ ಖಲೀಫ್ ಭಾರತೀಯ ಮುಸ್ಲಿಂ ಎಂದು ಟ್ವೀಟ್ ಮಾಡಿದ್ದ ಪಾಕಿಸ್ತಾನ ಮಾಜಿ ಸಚಿವನಿಗೆ ಟ್ವೀಟರಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ. 

ಟ್ವೀಟರ್ ಖಾತೆದಾರರೊಬ್ಬರು ಮಿಯಾ ಖಲೀಫ್ ಪೋಟೋ ಪೋಸ್ಟ್ ಮಾಡಿದ್ದರು. ಫೋಟೋ ಕೆಳಗೆ ಭಾರತದ ಪ್ರಾದೇಶಿಕ ಸಿನಿಮಾ ಕ್ಷೇತ್ರದ ಪ್ರಭಾವಿ ನಟಿಯಾಗಿದ್ದಾರೆ. ಹಿಜಬ್ ಧರಿಸಿ, ಸಿಎಎ ವಿರೋಧಿಸುವ ಮೂಲಕ ಭಾರತೀಯ ಮುಸ್ಲಿಂರೊಂದಿಗೆ ಐಕ್ಯತೆ ಮೂಡಿಸಿದ್ದಾರೆ. ಅವರಿಗೆ ನಮಸ್ಕರಿಸಿ, ಮೋದಿ ಅವರು ಶ್ರೀರ್ಘವೇ ರಾಜಿನಾಮೆ ನೀಡಲಿದ್ದಾರೆ ಎಂದು ರೆಹಮಾನ್ ಮಲಿಕ್ ಗೆ ಟ್ವೀಟ್ ಮಾಡಿದ್ದರು. 

ಈ ಫೋಟೋದ ಪೂರ್ವ ಪರ ತಿಳಿಯದ ಮಲಿಕ್, ಮಿಯಾ ಖಲೀಫ್ ರನ್ನು ಭಾರತೀಯ ಮುಸ್ಲಿಂ ಎಂದು ಭಾವಿಸಿ ಅವಳಿಗೆ ದೇವರು ಆಶೀರ್ವಾದ ಮಾಡಲಿ ಎಂದು ಟ್ವೀಟ್ ಮಾಡುವ ಮೂಲಕ ಪೇಚಿಗೆ ಸಿಲುಕಿದ್ದರು. ರೆಹಮಾನ್ ಟ್ವೀಟ್ ಟ್ರೋಲ್ ಗೆ ಗುರಿಯಾಗುತ್ತಿದ್ದಂತೆ ಡಿಲೀಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com