ದೇವರಂತೆ ಬಂದು ಕೆಳಗೆ ಬೀಳುತ್ತಿದ್ದ ಮಗುವನ್ನು ಕಾಪಾಡಿದ 17ರ ಬಾಲಕ, ವಿಡಿಯೋ ವೈರಲ್!
ರಸ್ತೆಯಲ್ಲಿ ನಿಂತಿದ್ದ 17 ವರ್ಷದ ಬಾಲಕನೊಬ್ಬ ಅಪಾರ್ಟ್ ಮೆಂಟ್ ವೊಂದರ ಎರಡನೇ ಫ್ಲೋರ್ ನಿಂದ ಅಕಸ್ಮಾತ್ ಆಗಿ ಕೆಳಗೆ ಬಿದ್ದ ಎರಡು ವರ್ಷದ ಮಗುವನ್ನು ಕಾಪಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಇಸ್ತಾನ್ ಬುಲ್: ರಸ್ತೆಯಲ್ಲಿ ನಿಂತಿದ್ದ 17 ವರ್ಷದ ಬಾಲಕನೊಬ್ಬ ಅಪಾರ್ಟ್ ಮೆಂಟ್ ವೊಂದರ ಎರಡನೇ ಫ್ಲೋರ್ ನಿಂದ ಅಕಸ್ಮಾತ್ ಆಗಿ ಕೆಳಗೆ ಬಿದ್ದ ಎರಡು ವರ್ಷದ ಮಗುವನ್ನು ಕಾಪಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಇಸ್ತಾನ್ ಬುಲ್ ನ ಫಾತಿಹ್ ಜಿಲ್ಲೆಯಲ್ಲಿ ಫೌಜಿ ಜಬಾತ್ ಎಂಬಾತ ದೊಹಾ ಮುಹಮ್ಮದ್ ಎಂಬ ಮಗುವನ್ನು ಕ್ಯಾಚ್ ಹಿಡಿದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪುಟ್ಟ ಮಗು ಬಾಲ್ಕನಿಯಿಂದ ತನ್ನ ತಲೆಯನ್ನು ಕೆಳಗೆ ಹಾಕಿ ನೋಡುತ್ತಿತ್ತು. ಇದನ್ನು ಗಮನಿಸಿದ ಬಾಲಕ ಕೂಡಲೇ ಜಾಗೃತನಾಗಿದ್ದಾನೆ. ಕೆಲ ಸಮಯದಲ್ಲೇ ಮಗು ಕೆಳಗೆ ಬಿದ್ದಿದೆ. ತಕ್ಷಣ ಬಾಲಕ ತನ್ನ ಎರಡು ಕೈಗಳಲ್ಲಿ ಮಗುವನ್ನು ಭದ್ರವಾಗಿ ಹಿಡಿದುಕೊಂಡಿದ್ದಾನೆ. ಪರಿಣಾಮ ಮಗು ಪ್ರಾಣಾಪಾಯದಿಂದ ಪಾರಾಗಿದೆ.
ಅಲ್ಜೀರಿಯನ್ ವಲಸಿಗನಾಗಿರುವ ಜಬಾತ್ ವರ್ಕ್ ಶಾಪ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.