ಕೊರೋನಾ ವಿರುದ್ಧ ಹೋರಾಟ; ಕರ್ನಾಟಕ ಮೂಲದ ಮತ್ತೋರ್ವ ವೈದ್ಯೆಗೆ ಅಮೆರಿಕನ್ನರಿಂದ 'ಡ್ರೈವ್ ಆಫ್ ಹಾನರ್' ಗೌರವ

ಮಾರಕ ಕೊರೋನಾ ವಿರುದ್ಧ ಅಮೆರಿಕದಲ್ಲಿ ಹೋರಾಡುತ್ತಿರುವ ಕರ್ನಾಟಕ ಮೂಲದ ಮತ್ತೋರ್ವ ವೈದ್ಯೆಗೆ ಅಮೆರಿಕನ್ನರು 'ಡ್ರೈವ್ ಆಫ್ ಹಾನರ್' ಗೌರವ ಸಲ್ಲಿಕೆ ಮಾಡಿದ್ದಾರೆ.
ಡಾ. ಪ್ರೀತಿ ಸುಬ್ರಮಣಿ
ಡಾ. ಪ್ರೀತಿ ಸುಬ್ರಮಣಿ
Updated on: 

ವಾಷಿಂಗ್ಟನ್: ಮಾರಕ ಕೊರೋನಾ ವಿರುದ್ಧ ಅಮೆರಿಕದಲ್ಲಿ ಹೋರಾಡುತ್ತಿರುವ ಕರ್ನಾಟಕ ಮೂಲದ ಮತ್ತೋರ್ವ ವೈದ್ಯೆಗೆ ಅಮೆರಿಕನ್ನರು 'ಡ್ರೈವ್ ಆಫ್ ಹಾನರ್' ಗೌರವ ಸಲ್ಲಿಕೆ ಮಾಡಿದ್ದಾರೆ.

ಹೌದು.. ಈ ಹಿಂದೆ ಮೈಸೂರು ಮೂಲದ ವೈದ್ಯ ಡಾ.ಉಮಾರಾಣಿ ಮಧುಸೂದನ್ ಅವರು ಕೊರೋನಾ ವೈರಸ್ ನಿರ್ವಹಣೆಗಾಗಿ ಸಲ್ಲಿಸಿದ್ದ ಸೇವೆಗಾಗಿ ಈ ಗೌರವಕ್ಕೆ ಪಾತ್ರರಾಗಿದ್ದರು. ಇದೀಗ ಅಂತಹುದೇ ಕಾರ್ಯಕ್ಕೆ ಕರ್ನಾಟಕ ಮೂಲದ ಮತ್ತೋರ್ವ ವೈದ್ಯೆಗೆ 'ಡ್ರೈವ್ ಆಫ್ ಹಾನರ್'  ಗೌರವ ಸಲ್ಲಿಕೆ ಮಾಡಲಾಗಿದೆ.

ಅಮೆರಿಕದ ಸೇಂಟ್ ಫ್ರಾನ್ಸಿಸ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಕರ್ನಾಟಕದ ಕೊಡಗು ಮೂಲದ ವೈದ್ಯೆ ಡಾ. ಪ್ರೀತಿ ಸುಬ್ರಮಣಿ ಅವರ ಸೇವೆಯನ್ನು ಗುರುತಿಸಿ ಅಲ್ಲಿನ ಸ್ಥಳೀಯ ಆಡಳಿತ ಅವರ ಮನೆ ಎದುರಲ್ಲಿ ವಿಶಿಷ್ಟವಾಗಿ ‘ಡ್ರೈವ್ ಆಫ್ ಹಾನರ್’  ಗೌರವವನ್ನ ಸಲ್ಲಿಸಿದೆ.

ಮೂಲತಃ ಕೊಡಗಿನ ಡಾ. ಪ್ರೀತಿ ಸುಬ್ರಮಣಿ, ಮಾಜಿ ರಣಜಿ ಕ್ರಿಕೆಟಿಗ ಮುಂಡಂಡ ರಾಜಪ್ಪ ಮತ್ತು ಜಯಂತಿ ದಂಪತಿಯ ಪುತ್ರಿ. ಅವರು ಬೆಂಗಳೂರಿನಲ್ಲಿ ತಮ್ಮ ವೈದ್ಯಕೀಯ ಪದವಿ ಪಡೆದಿದ್ದರು. ಸದ್ಯ ಪತಿ ಡಾ.ಸುಬ್ರಮಣಿ ಹಾಗೂ ಪ್ರೀತಿ ಅವರು ಇಬ್ಬರು ಮಕ್ಕಳ ಜೊತೆ ಅಮೆರಿಕಾದ  ಸೌತ್ ವಿಂಡ್ಸರ್​ನಲ್ಲಿ ವಾಸವಾಗಿದ್ದಾರೆ.

ಏನಿದು ಡ್ರೈವ್ ಆಫ್ ಹಾನರ್..?
ಡ್ರೈವ್ ಆಫ್ ಹಾನರ್ ಅಂದರೆ ಸರ್ಕಾರಿ ಇಲಾಖೆಯ ವಾಹನಗಳು ಅಂದರೆ ಪೊಲೀಸ್, ಅಗ್ನಿ ಶಾಮಕ ದಳ ಜೊತೆಗೆ ಖಾಸಗಿ ವ್ಯಕ್ತಿಗಳೂ ತಮ್ಮ ವಾಹನಗಳಲ್ಲಿ ಯಾವ ವ್ಯಕ್ತಿಗೆ ಗೌರವ ಸಲ್ಲಿಸಬೇಕೋ ಅವರ ಮನೆ ಮುಂದೆ ಪರೇಡ್ ನಡೆಸುವುದು. ಹೀಗೆ ಪರೇಡ್ ನಡೆಸುವ ವೇಳೆ ಆ  ವಾಹನಗಳು ಸೈರನ್ ಮತ್ತು ಹಾರ್ನ್​ಗಳನ್ನು ಮಾಡುತ್ತವೆ. ಅಲ್ಲದೆ, ಗೌರವ ಸಲ್ಲಿಸಬೇಕಿರುವ ವ್ಯಕ್ತಿಯ ಮನೆ ಎದುರು ಪ್ರತಿ ವಾಹನವೂ ಕೆಲ ಸೆಕೆಂಡ್ ಗಳ ಕಾಲ ನಿಂತು ಧನ್ಯವಾದ ಅರ್ಪಿಸಿದ ಬಳಿಕ ಮುಂದೆ ಸಾಗುತ್ತವೆ. ಈ ಹಿಂದೆ ಈ ಗೌರವಕ್ಕೆ ಮೈಸೂರು ಮೂಲದ ವೈದ್ಯ  ಡಾ.ಉಮಾರಾಣಿ ಮಧುಸೂದನ್ ಅವರು ಪಾತ್ರರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com