ಕುಲಭೂಷಣ್ ಜಾಧವ್ ಗೆ ಅಡಚಣೆರಹಿತ ದೂತವಾಸ ಸೌಲಭ್ಯಕ್ಕೆ ಪಾಕ್ ಒಪ್ಪಿಗೆ; ಸೆ.3 ರ ವಿಚಾರಣೆ ಪ್ರಕ್ರಿಯೆಗೂ ಭಾರತಕ್ಕೆ ಆಹ್ವಾನ

ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾಗಿರುವ ಕುಲಭೂಷಣ್ ಜಾಧವ್ ಗೆ ಅಡಚಣೆಯಿಲ್ಲದ ದೂತವಾಸ ಸೌಲಭ್ಯ ಕಲ್ಪಿಸಲು ಪಾಕಿಸ್ತಾನ ಮುಂದಾಗಿದೆ. 
ಕುಲಭೂಷಣ್ ಜಾದವ್
ಕುಲಭೂಷಣ್ ಜಾದವ್
Updated on: 

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾಗಿರುವ ಕುಲಭೂಷಣ್ ಜಾಧವ್ ಗೆ ಅಡಚಣೆಯಿಲ್ಲದ ದೂತವಾಸ ಸೌಲಭ್ಯ ಕಲ್ಪಿಸಲು ಪಾಕಿಸ್ತಾನ ಮುಂದಾಗಿದೆ. 

ದೂತವಾಸ ಸಂವಹನದ ಸೌಲಭ್ಯ ಕಲ್ಪಿಸುವುದಕ್ಕೆ ಈ ಹಿಂದೆ ವಿಧಿಸಲಾಗಿದ್ದ ನಿಬಂಧನೆಗಳನ್ನು ಸಡಿಲಗೊಳಿಸಿರುವ ಪಾಕಿಸ್ತಾನ ಯಾವುದೇ ಭಾಷೆಯಲ್ಲಿ ಬೇಕಾದರೂ ಭಾರತದ ದೂತವಾಸ ಕಚೇರಿಯಿಂದ ಕುಲಭೂಷಣ್ ಜಾಧವ್ ಜೊತೆಗೆ ಸಂವಹನ ನಡೆಸಬಹುದೆಂದು ಹೇಳಿದೆ.  ಈ ಹಿಂದೆ ಆಂಗ್ಲ ಭಾಷೆಯಲ್ಲಿ ಮಾತ್ರವೇ ಸಂವಹನ ನಡೆಸಬೇಕೆಂಬ ಷರತ್ತು ವಿಧಿಸಲಾಗಿತ್ತು. 

ಇಸ್ಲಾಮಾಬಾದ್ ಹೈಕೋರ್ಟ್‌ನ ವಿಶೇಷ ನ್ಯಾಯಪೀಠ ಜಾಧವ್ ಪ್ರಕರಣವನ್ನು ಸೆಪ್ಟೆಂಬರ್ 3ಕ್ಕೆ ಮುಂದೂಡಿದ್ದು, ವಿಚಾರಣೆ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತೆ ಭಾರತಕ್ಕೆ ಆಹ್ವಾನ ನೀಡಿದ್ದು ಭಾರತವೇ ತನ್ನ ಇಚ್ಛೆಯಂತೆ ಜಾಧವ್ ಪರ ವಕೀಲರನ್ನು ನೇಮಕ ಮಾಡಬಹುದಾಗಿದೆ ಎಂದು ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com