ವಿಶ್ವಾದ್ಯಂತ ಜಿ-ಮೇಲ್ ಸೇವೆ ವ್ಯತ್ಯಯ; ಸಮಸ್ಯೆ ಬಗೆಹರಿಸುವುದಾಗಿ ಹೇಳಿದ ಗೂಗಲ್ 

ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಇಂದು ಜಿ-ಇಮೇಲ್ ಸೇವೆಯಲ್ಲಿ ವ್ಯತ್ಯಯ ಕಂಡುಬಂದಿತ್ತು, ಬಳಕೆದಾರರು ಸಂದೇಶ ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಇಂದು ಜಿ-ಇಮೇಲ್ ಸೇವೆಯಲ್ಲಿ ವ್ಯತ್ಯಯ ಕಂಡುಬಂದಿತ್ತು, ಬಳಕೆದಾರರು ಸಂದೇಶ ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ.

ಹೌದ.. ಇಂದು ಖ್ಯಾತ ಇ-ಮೇಲ್ ಸೇವಾ ಸಂಸ್ಥೆ ಗೂಗಲ್ ನ ಜಿ-ಮೇಲ್ ಸೇವೆಯಲ್ಲಿ ವ್ಯತ್ಯಯವಾಗಿದ್ದು, ಈ ಬಗ್ಗೆ ಸ್ವತಃ ಜಿ-ಮೇಲ್ ನ ಮಾತೃ ಸಂಸ್ಥೆ ಗೂಗಲ್ ಸ್ಪಷ್ಟನೆ ನೀಡಿದೆ. ಅಲ್ಲದೆ ಸಾಧ್ಯವಾದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದೆ.

ಮೂಲಗಳ ಪ್ರಕಾರ ಭಾರತದಲ್ಲಿ ಬೆಳಗ್ಗೆ 11 ಗಂಟೆಯಿಂದ ಈ ಸಮಸ್ಯೆ ಎದುರಾಗಿದ್ದು, ಜಿಮೇಲ್‌ನಲ್ಲಿ ಚಿತ್ರಗಳು, ವಿಡಿಯೊಗಳು ಹಾಗೂ ಫೈಲ್‌ಗಳನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ. ಜಿಮೇಲ್‌ನ ವೈಯಕ್ತಿಕ ಖಾತೆಗಳಲ್ಲಿ ದೊಡ್ಡ ದೊಡ್ಡ ಮೇಸೆಜ್‌ಗಳನ್ನು ಕಳಹಿಸಲು ಆಗುತ್ತಿಲ್ಲ ಎಂದು ಬಳಕೆದಾರರು ದೂರಿದ್ದಾರೆ.

ಭಾರತ ಸೇರಿದಂತೆ ಏಷ್ಯಾ, ಯುರೋಪ್‌ ಹಾಗೂ ಅಮೆರಿಕ ಖಂಡದ ಹಲವು ದೇಶಗಳಲ್ಲಿ ಈ ಸಮಸ್ಯೆ ಉಂಟಾಗಿದೆ. ಜಿಸ್ಯೂಟ್‌ ಸೇರಿದಂತೆ, ಗೂಗಲ್‌ ಡ್ರೈವ್‌ ಸೇವೆಯಲ್ಲೂ ಸಮಸ್ಯೆಯಾಗಿದೆ. ಗೂಗಲ್‌ ಕಂಪನಿ ಜಿಮೇಲ್‌ ಸೇವೆಯಲ್ಲಿ ತೊಂದರೆಯಾಗಿರುವುದರ ಬಗ್ಗೆ ಜಿಸ್ಯೂಟ್‌ ಡ್ಯಾಶ್‌ ಬೋರ್ಡ್‌ನಲ್ಲಿ ಪ್ರಕಟಿಸಿದೆ.  ಸಮಸ್ಯೆ ಬಗ್ಗೆ ತಂತ್ರಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com