ಸೊಲೈಮನಿ ಹತ್ಯೆಗೆ ಪ್ರತೀಕಾರ: ಡೊನಾಲ್ಡ್ ಟ್ರಂಪ್ ತಲೆಗೆ 575 ಕೋಟಿ ರೂ. ಬಹುಮಾನ ಘೋಷಿಸಿದ ಇರಾನ್!

ಇರಾನ್ ಜನರಲ್ ಕಮಾಂಡರ್ ಖಾಸಿಮ್ ಸೊಲೈಮನಿ ಹತ್ಯೆಗೆ ಪ್ರತಿಕಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತಲೆ ತೆಗೆಯುವವರಿಗೆ 575 ಕೋಟಿ ರುಪಾಯಿಯನ್ನು ಇರಾನ್ ಸರ್ಕಾರ ಘೋಷಿಸಿದೆ ಎನ್ನಲಾಗಿದೆ.
ಡೊನಾಲ್ಡ್ ಟ್ರಂಪ್-ಖಾಸಿಮ್ ಸೊಲೈಮನಿ
ಡೊನಾಲ್ಡ್ ಟ್ರಂಪ್-ಖಾಸಿಮ್ ಸೊಲೈಮನಿ
Updated on: 

ಟೆಹ್ರಾನ್: ಇರಾನ್ ಜನರಲ್ ಕಮಾಂಡರ್ ಖಾಸಿಮ್ ಸೊಲೈಮನಿ ಹತ್ಯೆಗೆ ಪ್ರತಿಕಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತಲೆ ತೆಗೆಯುವವರಿಗೆ 575 ಕೋಟಿ ರುಪಾಯಿಯನ್ನು ಇರಾನ್ ಸರ್ಕಾರ ಘೋಷಿಸಿದೆ ಎನ್ನಲಾಗಿದೆ. 

ಖಾಸಿಮ್ ಅಂತಿಮ ಯಾತ್ರೆಯ ಮೆರವಣಿಗೆ ಸಂದರ್ಭದಲ್ಲಿ ಸುದ್ದಿಯನ್ನು ಪ್ರಸಾರ ಮಾಡಿದ್ದ ಇರಾನ್ ನ ಅಧಿಕೃತ ಟಿವಿ ಚಾನೆಲ್ ಗಳಲ್ಲಿ ದೇಶದ ಪ್ರತಿಯೊಬ್ಬ ಇರಾನಿ ಪ್ರಜೆ ಒಂದು ಡಾಲರ್ ಕೊಟ್ಟರೂ ಅದನ್ನು ಡೊನಾಲ್ಡ್ ಟ್ರಂಪ್ ಹತ್ಯೆಗೈದವರಿಗೆ ಸೇರಲಿದೆ ಎಂದು ಅಮೆರಿಕ ಮಿರರ್ ಡಾಟ್ ಕಾಮ್ ವರದಿ ಮಾಡಿದೆ. 

ಇರಾನಿನಲ್ಲಿ 80 ಮಿಲಿಯನ್ ಜನರಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ 1 ಡಾಲರ್ ನೀಡಿದರೂ ಅದು ಸುಮಾರು 575 ಕೋಟಿ ರುಪಾಯಿ ಆಗಲಿದೆ. ಈ ಹಣವನ್ನು ಟ್ರಂಪ್ ಹತ್ಯೆಗೈಯುವವರಿಗೆ ನೀಡಲಾಗುವುದು ಎಂದು ಘೋಷಿಸಿರುವುದಾಗಿ ವರದಿ ವಿವರಿಸಿದೆ. 

ಡೊನಾಲ್ಡ್ ಟ್ರಂಪ್ ಆದೇಶದ ಮೇರೆಗೆ ಅಮೆರಿಕ ಪಡೆ ಜನವರಿ 3ರಂದು ಇರಾಕ್ ರಾಜಧಾನಿ ಬಾಗ್ದಾದ್ ವಿಮಾನ ನಿಲ್ದಾಣದ ಸಮೀಪ ಇರಾನ್ ಟಾಪ್ ಕಮಾಂಡರ್ ಖಾಸಿಮ್ ಸೊಲೈಮನಿ ಹಾಗೂ ಇರಾನ್ ಅರೆ ಸೇನಾಪಡೆಯ ಡೆಪ್ಯುಟಿ ಮುಖ್ಯಸ್ಥ ಅಬು ಮಹ್ದಿ ಅಲ್ ಮುಹಂಡಿತ್ ಸೇರಿದಂತೆ ಹಲವು ನಾಯಕರನ್ನು ಅಮೆರಿಕ ವೈಮಾನಿಕ ದಾಳಿಯಲ್ಲಿ ಹತ್ಯೆಗೈದಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com