ಮ್ಯಾನ್ಮಾರ್ ನಲ್ಲಿ ಭೂ ಕುಸಿತ: 113 ಜನರ ಸಾವು

ಮ್ಯಾನ್ಮಾರ್‌ನಲ್ಲಿ ಮಾನ್ಸೂನ್ ಮಳೆಯಿಂದ ಉಂಟಾದ ಭೂಕುಸಿತದಿಂದ ಕನಿಷ್ಠ 113 ಜನರು ಸಾವನ್ನಪ್ಪಿದ್ದಾರೆ ಎಂದು ದೇಶದ ತುರ್ತು ಸೇವೆಗಳು ಗುರುವಾರ ತಿಳಿಸಿವೆ.
ಪ್ರತ್ಯಕ್ಷ ಚಿತ್ರ
ಪ್ರತ್ಯಕ್ಷ ಚಿತ್ರ
Updated on: 

ಬ್ಯಾಂಕಾಕ್‍: ಮ್ಯಾನ್ಮಾರ್‌ನಲ್ಲಿ ಮಾನ್ಸೂನ್ ಮಳೆಯಿಂದ ಉಂಟಾದ ಭೂಕುಸಿತದಿಂದ ಕನಿಷ್ಠ 113 ಜನರು ಸಾವನ್ನಪ್ಪಿದ್ದಾರೆ ಎಂದು ದೇಶದ ತುರ್ತು ಸೇವೆಗಳು ಗುರುವಾರ ತಿಳಿಸಿವೆ.

ಹಿಂದಿನ ದಿನ, ಕ್ಸಿನ್ಹುವಾ ಸುದ್ದಿ ಸಂಸ್ಥೆಯು 96 ರ ಸಾವಿನ ಸಂಖ್ಯೆಯನ್ನು ವರದಿ ಮಾಡಿತ್ತು. ಸ್ಥಳೀಯ ಸಮಯ ಬೆಳಿಗ್ಗೆ 8 ಗಂಟೆಗೆ ಕಾಚಿನ್ ರಾಜ್ಯದಲ್ಲಿರುವ ಹಪಕಾಂತ್ ಟೌನ್‌ಶಿಪ್ ಬಳಿಯ ಜೇಡ್ ಗಣಿ ಬಳಿ ಭೂಕುಸಿತ ಸಂಭವಿಸಿದೆ.
 
ಗಣಿಗಾರಿಕೆ ನಡೆಯುತ್ತಿದ್ದ ಭೂ ಕುಸಿತವಾಗಿರುವ ಕಾರಣ ಸಾವುನೋವುಗಳು ಬೃಹತ್ ಸಂಖ್ಯೆಯಲ್ಲಿ ಸಂಭವಿಸಿರಬಹುದು ಎಂಬ ಆತಂಕಭರಿತ ಶಂಕೆ ಎದುರಾಗಿದೆ. 

"ಹಪಕಾಂತ್‌ನಲ್ಲಿನ ಭೂಕುಸಿತದ ಇತ್ತೀಚಿನ ಮಾಹಿತಿಯ ಪ್ರಕಾರ,113 ಮಂದಿ ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಗಳು ಮುಂದುವರೆದಿದೆ" ಎಂದು ದೇಶದ ಅಗ್ನಿಶಾಮಕ ಇಲಾಖೆ ಫೇಸ್‌ಬುಕ್‌ನಲ್ಲಿ ಬರೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com