ವಿದೇಶ

ವಿಶ್ವದಲ್ಲೆಡೆ ಕೊರೋನಾ ರೌದ್ರನರ್ತನ: ಸೋಂಕು ಪೀಡಿತರ ಸಂಖ್ಯೆ 1.71 ಕೋಟಿಗೆ ಏರಿಕೆ

ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ವಿಶ್ವಾದ್ಯಂತ 1.71 ಕೋಟಿ ಮೀರಿದೆ. ಈ ಕಾಯಿಲೆಯಿಂದ 669,235 ಕ್ಕೂ ಹೆಚ್ಚು ಸಾವುಗಳು ದಾಖಲಾಗಿವೆ ಎಂದು ವಲ್ಡೋಮೀಟರ್​ ಡೇಟಾ ವರದಿಗಳು ತಿಳಿಸಿವೆ.

ವಿಶ್ವದಲ್ಲೆಡೆ ಕೊರೋನಾ ರೌದ್ರನರ್ತನ: ಸೋಂಕು ಪೀಡಿತರ ಸಂಖ್ಯೆ 1.71 ಕೋಟಿಗೆ ಏರಿಕೆ
ಸಂಗ್ರಹ ಚಿತ್ರ
Published On :

ಜಿನಿವಾ: ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ವಿಶ್ವಾದ್ಯಂತ 1.71 ಕೋಟಿ ಮೀರಿದೆ. ಈ ಕಾಯಿಲೆಯಿಂದ 669,235 ಕ್ಕೂ ಹೆಚ್ಚು ಸಾವುಗಳು ದಾಖಲಾಗಿವೆ ಎಂದು ವಲ್ಡೋಮೀಟರ್​ ಡೇಟಾ ವರದಿಗಳು ತಿಳಿಸಿವೆ. 

ವಲ್ಡೋಮೀಟರ್​ ಡೇಟಾ ವರದಿಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ 284,042 ಹೊಸ ಸೋಂಕುಗಳು ಮತ್ತು 5,274 ಕರೋನವೈರಸ್ ಸಂಬಂಧಿತ ಸಾವುನೋವುಗಳು ವಿಶ್ವದಾದ್ಯಂತ ದಾಖಲಾಗಿವೆ ಎಂದು ತಿಳಿದುಬಂದಿದೆ. 

ವಿಶ್ವದ ಅತೀ ಹೆಚ್ಚು ಸೋಂಕಿತರನ್ನು ಹೊಂದಿ ಟಾಪ್ 10 ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವ ಅಮೆರಿಕಾದಲ್ಲಿ ಈ ವರೆಗೂ ಬರೋಬ್ಬರಿ 4,568,037 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 153,840 ಮಂದಿ ಬಲಿಯಾಗಿದ್ದಾರೆ. 

ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ ನಲ್ಲಿ ಸೋಂಕಿತರ ಸಂಖ್ಯೆ 2,555,518ಕ್ಕೆ ಏರಿಕೆಯಾಗಿದ್ದು, 90,188 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ ಈ ವರೆಗೂ 1,584,384 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 35,003 ಮಂದಿ ಬಲಿಯಾಗಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.