ಡೊನಾಲ್ಡ್ ಟ್ರಂಪ್ ಪುನರಾಯ್ಕೆಗೆ ಭಾರತೀಯ ಅಮೆರಿಕನ್ನರ ಪಣ: ಚುನಾವಣೆಯಲ್ಲಿ ಅಧ್ಯಕ್ಷರ ಪರ ಪ್ರಚಾರಕ್ಕೆ ಒಲವು!

ನವೆಂಬರ್ ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರಾಯ್ಕೆಗೆ ಭಾರತೀಯ-ಅಮೆರಿಕನ್ನರು ಪಣ ತೊಟ್ಟಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ ಟನ್: ನವೆಂಬರ್ ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರಾಯ್ಕೆಗೆ ಭಾರತೀಯ-ಅಮೆರಿಕನ್ನರು ಪಣ ತೊಟ್ಟಿದ್ದಾರೆ.

ಭಾರತೀಯ ಅಮೆರಿಕನ್ನರು ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪರ ಪ್ರಚಾರ ಮಾಡಲು ತೀರ್ಮಾನಿಸಿ ಭಾರತೀಯ ಸಮುದಾಯವನ್ನು ಟ್ರಂಪ್ ಪರ ಜೋಡಿಸಲು ಸಜ್ಜುಗೊಂಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಅಧ್ಯಕ್ಷೀಯ ಚುನಾವಣೆ ತಯಾರಿ ಸಂಬಂಧ ಫ್ಲೋರಿಡಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್ ಭಾರತೀಯ ಸಮುದಾಯದವರಿಗೆ ಆಹ್ವಾನ ನೀಡಿದ್ದರು. ಈ ಸಭೆಯಲ್ಲಿ 36 ಕ್ಕೂ ಹೆಚ್ಚು ಮಂದಿ ಭಾರತೀಯರು ಭಾಗಿಯಾಗಿದ್ದರು. 

ಈ ವೇಳೆ ಭಾರತೀಯ ಅಮೆರಿಕನ್ ಸಮುದಾಯದ, ಗ್ಲೋಬಲ್ ರಿಯಲ್ ಎಸ್ಟೇಟ್ ಇನ್ವೆಸ್ಟ್ಮೆಂಟ್ ಎಜುಕೇಷನಲ್ ಹಾಸ್ಪೆಟಲ್ಸ್ ನ ಸಲಹೆಗಾರರೂ ಆಗಿರುವ ನ್ಯೂಯಾರ್ಕ್ ನ ಎ.ಐ ಮೆಸೋನ್ ಅವರ ಕೆಲಸಗಳನ್ನು ಗುರುತಿಸಿರುವ ಡೊನಾಲ್ಡ್ ಟ್ರಂಪ್ ಸಭೆಯಲ್ಲಿ ಅವರ ಹೆಸರು, ಕೆಲಸಗಳನ್ನು ಉಲ್ಲೇಖಿಸಿ ಮೆಚ್ಚುಗೆ ಸೂಚಿಸಿದ್ದಾರೆ. ತಮ್ಮ ಪುನರಾಯ್ಕೆಗಾಗಿ ಭಾರತೀಯ-ಅಮೆರಿಕನ್ ಸಮುದಾಯವನ್ನು ಒಗ್ಗೂಡಿಸುತ್ತಿರುವುದಕ್ಕೆ ಎ.ಐ ಮೆಸೋನ್ ಅವರನ್ನು ಹಾಡಿ ಹೊಗಳಿದ್ದಾರೆ. 

ಈ ಬೆಳವಣಿಗೆ ಬಗ್ಗೆ ಅನೇಕ ಭಾರತೀಯ ಅಮೆರಿಕನ್ನರು ಸಂತಸ ವ್ಯಕ್ತಪಡಿಸಿದ್ದು, ಡೊನಾಲ್ಡ್ ಟ್ರಂಪ್ ಭಾರತೀಯ ಅಮೆರಿಕನ್ನರ ಕೊಡುಗೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಭೆಯಲ್ಲಿ ಉಲ್ಲೇಖಿಸಿದ್ದು ಅತ್ಯಂತ ಸಂತಸ ತಂದಿದೆ, ನಾನು ದೇಶಾದ್ಯಂತ ಡೊನಾಲ್ಡ್ ಟ್ರಂಪ್ ಪರ ಪ್ರಚಾರ ಮಾಡುತ್ತೇನೆ ಪ್ರತಿ ಅಮೆರಿಕಾದಲ್ಲಿರುವ ಭಾರತೀಯನನ್ನೂ ಟ್ರಂಪ್ ಬೆಂಗಲಿಗನನ್ನಾಗಿ ಮಾಡುತ್ತೇವೆ ಎಂದು ಟೆಕ್ಸಾಸ್ ನ ಹರಿ ನಂಬೂದರಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com