

ಜಿನೀವಾ: ಮಾರಣಾಂತಿಕ ಕರೋನವೈರಸ್ (ಕೊವಿದ್ -19) ವಿರುದ್ಧ ಹೋರಾಟಕ್ಕೆ ಇಟಲಿ ಹೆಚ್ಚುವರಿ 25 ಶತಕೋಟಿ ಯುರೋ ( ಸುಮಾರು 28 ಶತಕೋಟಿ ಅಮೆರಿಕನ್ ಡಾಲರ್ ) ವಿನಿಯೋಗಿಸಲು ಸಜ್ಜಾಗಿದೆ ಎಂದು ಪ್ರಧಾನಿ ಗೈಸೆಪೆ ಕಾಂಟೆ ಬುಧವಾರ ಪ್ರಕಟಿಸಿದ್ದಾರೆ.
‘ಸರ್ಕಾರ 25 ಶತಕೋಟಿ ಯುರೋಗಳಷ್ಟು ಭಾರೀ ಮೊತ್ತದ ಅನುದಾನ ಒದಗಿಸಿದೆ. ಇದನ್ನು ತಕ್ಷಣವೇ ಬಳಸಿಕೊಳ್ಳುವುದಿಲ್ಲ. ಆದರೆ ಈ ತುರ್ತು ಪರಿಸ್ಥಿತಿಯ ಎಲ್ಲಾ ತೊಂದರೆಗಳನ್ನು ಎದುರಿಸಲು ಅನುದಾನ ಬಳಕೆಗೆ ಲಭ್ಯವಿರುತ್ತದೆ.’ ಎಂದು ಕಾಂಟೆ ಸಚಿವ ಸಂಪುಟ ಸಭೆ ನಂತರ ತಿಳಿಸಿದ್ದಾರೆ.
ರೋಗಿಗಳನ್ನು ಪ್ರತ್ಯೇಕವಾಗಿರಿಸುವ ಕ್ರಮಗಳನ್ನು ಕಠಿಣಗೊಳಿಸುವಂತೆ ವೈರಸ್ ಪೀಡಿತ ಲೊಂಬಾರ್ಡಿ ಸೇರಿದಂತೆ ದೇಶದ ಉತ್ತರದ ಪ್ರದೇಶಗಳ ಅಧಿಕಾರಿಗಳ ಮನವಿಯನ್ನು ಪರಿಶೀಲಿಸಲು ಇಟಾಲಿಯನ್ ಸರ್ಕಾರ ಸಿದ್ಧವಾಗಿದೆ ಎಂದು ಕಾಂಟೆ ಹೇಳಿದ್ದಾರೆ