

ವಾಷಿಂಗ್ಟನ್: ಕೊರೋನಾ ವೈರಸ್ ಎಂಬ ಭೂಗತ ಶತ್ರುವಿನೊಂದಿಗೆ ಇಡೀ ವಿಶ್ವ ಹೋರಾಡುತ್ತಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಇಡೀ ವಿಶ್ವ ಭೂಗತ ಶತ್ರವಿನೊಂದಿಗೆ ಹೋರಾಡುತ್ತಿದ್ದು, ನಾವು ಅದರಲ್ಲಿ ಗೆಲವು ಸಾಧಿಸುತ್ತೇವೆಂದು ಹೇಳಿದ್ದಾರೆ.
ಕೊರೋನಾ ವೈರಸ್'ನ್ನು ತೊಡೆದುಹೊಕಬೇಕಿದೆ. ನಾವು ಈ ಯುದ್ಧದಲ್ಲಿ ಆದರ್ಶದಿಂದ ಹಾಗೂ ತ್ವರಿತಗತಿಯಲ್ಲಿ ಗೆಲ್ಲಬೇಕಿದೆ ಎಂದು ತಿಳಿಸಿದ್ದಾರೆ.
ಪ್ರವಾಸೋದ್ಯಮ ಉದ್ಯಮದ ಸಿಇಒಗಳೊಂದಿಗೆ ನಿನ್ನೆ ನಡೆದ ಸಭೆಯಲ್ಲಿ ಮಾತನಾಡಿದ್ದ ಟ್ರಂಪ್ ಅವರು, ವಿಮಾನಯಾನ ಸಂಸ್ಥೆಗಳಿಗೆ ನಾನು ಸಹಾಯ ಮಾಡಬೇಕಿದೆ. ಸೋಂಕು ಹರಡುವಲ್ಲಿ ಅವರ ಯಾವುದೇ ತಪ್ಪಿಲ್ಲ. ಎಲ್ಲಾ ಸಮಸ್ಯೆಯೂ ಶೀಘ್ರದಲ್ಲಿಯೇ ಪರಿಹಾರಗೊಳ್ಳಲಿವೆ.
ಕೊರೋನಾ ವೈರಸ್ ವಿಮಾನಯಾನ ಉದ್ಯಮದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂಬುದು ನಮಗೆ ತಿಳಿದಿದೆ. ಪ್ರಸ್ತುತ ವೈರಸ್'ನ್ನು ತೊಡೆದುಹಾಕುವುದು ನಮ್ಮ ಗುರಿಯಾಗಿದ್ದು, ಆ ಗುರಿ ನಾವು ಸಾಧಿಸುತ್ತೇವೆ. ಹಿಂದೆಂದಿಗಿಂತಲೂ ಬಲವಾಗಿ ಹಿಮ್ಮೆಟ್ಟಿಸಲು ಆಕ್ರಮಣಕಾರಿ ಕ್ರಮದಿಂದಲೇ ಅದನ್ನು ನಾವು ಭೂಗತ ಶತ್ರು ಎಂದು ಕರೆಯುತ್ತಿದ್ದೇವೆಂದು. ನಮ್ಮ ಈ ಯುತ್ಧದಲ್ಲಿ ಎಲ್ಲರೂ ಸಹಕರಿಸುತ್ತಿದ್ದಾರೆಂದು ಹೇಳಿದ್ದಾರೆ.
ಈ ಹಿಂದೆ ಟ್ರಂಪ್ ಅವರು ಮಾಡಿದ್ದ ಟ್ವೀಟ್ ವೊಂದು, ಚೀನಿಯಲ ಮುಖ ಕೆಂಪಗಾಗುವಂತೆ ಮಾಡಿತ್ತು. ಕೊರೋನಾವನ್ನು ಚೀನೀ ವೈರಸ್ ಎಂದು ಕರೆದಿದ್ದರು.
ಚೈನೀಸ್ ವೈರಸ್ ನಿಂದ ಹೆಚ್ಚು ಬಾಧಿತವಾಗಿರುವ ಏರ್'ಲೈನ್ಸ್ ಮತ್ತಿತರ ಉದ್ಯಮಿಗಳಿಗೆ ಅಮೆರಿಕಾ ಬಲ ನೀಡುತ್ತದೆ. ನಾವು ಹಿಂದೆಂದಿಗಿಂತಲೂ ಬಲಶಾಲಿಗಳಾಗಿರುತ್ತೇವೆಂದು ಹೇಳಿದ್ದರು.