

ರೋಮ್/ನವದೆಹಲಿ: ಕೊರೋನಾ ರೌದ್ರಾವತಾರಕ್ಕೆ ಇಟಲಿ ಅಕ್ಷರಶಃ ತತ್ತರಿಸಿದ್ದು ಭಾನುವಾರ ಬರೋಬ್ಬರಿ 651 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 5,476ಕ್ಕೆ ಏರಿಕೆಯಾಗಿದೆ.
ಇದರ ಜೊತೆಗೆ ಜಗತ್ತಿನಲ್ಲಿ ಒಟ್ಟಾರೆ ಈ ಒಂದು ದಿನದಲ್ಲೇ 1,566 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಇದರೊಂದಿಗೆ ಒಟ್ಟಾರೆ ಜಗತ್ತಿನಾದ್ಯಂತ 14,573 ಮಂದಿ ಕೊರೋನಾಗೆ ಬಲಿಯಾಗಿದ್ದು 36 ಸಾವಿರ ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ.
ಭಾರತದಲ್ಲಿ 400ರ ಗಡಿ ದಾಡಿದ ಸೋಂಕಿತರ ಸಂಖ್ಯೆ!
ಇದೇ ವೇಳೆ ಭಾರತದಲ್ಲೂ ಇಂದು ಹೊಸದಾಗಿ 64 ಪ್ರಕರಣಗಳು ಪತ್ತೆಯಾಗಿದ್ದು ಒಟ್ಟಾರೆ 400 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಹೀಗಾಗಲೆ 7 ಮಂದಿ ಮೃತಪಟ್ಟಿದ್ದಾರೆ.