ನನ್ನ ಸ್ವಾಗತಕ್ಕೆ 1 ಕೋಟಿ ಜನ ಆಗಮಿಸುತ್ತಿದ್ದಾರೆ: ಭಾರತ ಭೇಟಿ ಕುರಿತು ಟ್ರಂಪ್

ಚೊಚ್ಚಲ ಭಾರತ ಪ್ರವಾಸ ಕೈಗೊಳ್ಳುತ್ತಿರುವ ತಮಗೆ ಅದ್ಧೂರಿ ಸ್ವಾಗತ ಕೋರಲು ಅಹಮದಾಬಾದ್'ನಲ್ಲಿ 1 ಕೋಟಿ ಜನರು ಬರಲಿದ್ದಾರೆಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ಚೊಚ್ಚಲ ಭಾರತ ಪ್ರವಾಸ ಕೈಗೊಳ್ಳುತ್ತಿರುವ ತಮಗೆ ಅದ್ಧೂರಿ ಸ್ವಾಗತ ಕೋರಲು ಅಹಮದಾಬಾದ್'ನಲ್ಲಿ 1 ಕೋಟಿ ಜನರು ಬರಲಿದ್ದಾರೆಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. 

ಕಳೆದ ಕೆಲ ದಿನಗಳ ಹಿಂದಷ್ಟೇ 50ರಿಂದ 70 ಲಕ್ಷ ಜನ ತಮ್ಮ ಸ್ವಾಗತಕ್ಕೆ ಸೇರಲಿದ್ದಾರೆಂದು ಹೇಳಿಕೊಂಡು ಬಂದಿದ್ದ ಟ್ರಂಪ್ ಅವರು ಕೊಲರಾಡೋದಲ್ಲಿ ನಡೆದ ಸಮಾವೇಶವೊಂದರಲ್ಲಿ ಈ ಸಂಖ್ಯೆಯನ್ನು ಏಕಾಏಕಿ 1 ಕೋಟಿಗೆ ಹೆಚ್ಚಿಸಿದ್ದಾರೆ. 

ಈ ಕುರಿತು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ತಮಗೆ ಮಾಹಿತಿ ನೀಡಿದ್ದಾರೆಂದು ಹೇಳಿದ್ದಾರೆ. ಆದರೆ, ಅಹಮದಾಬಾದ್'ನ ನಗರಪಾಲಿಕೆ ಪ್ರಕಾರ ಆ ನಗರದ ಜನಸಂಖ್ಯೆಯೇ 70 ಲಕ್ಷ ಇದ್ದಾರೆಂದು ತಿಳಿದುಬಂದಿದೆ. 

ಈ ನಡುವೆ ಟ್ರಂಪ್ ಭಾರತ ಭೇಟಿಗೆ ದಿನಗಣನೆ ಆರಂಭವಾಗಿದ್ದು, ಸಂಪರ್ಕ ಸಾಧನೆಗಳನ್ನು ಹೊತ್ತ ಅಮೆರಿಕಾದ ವಾಯುಪಡೆಯ ಸಿ-17 ಗ್ಲೋಬ್ ಮಾಸ್ಟರ್ ಕಾರ್ಗೋದ 3 ವಿಮಾನಗಳು ಅಹಮದಾಬಾದ್ ನಲ್ಲಿ ಲ್ಯಾಂಡ್ ಆಗಿವೆ. 

ಟ್ರಂಪ್ ಅವರ ಭಾರೀ ತೂಕದ ದ ಬೀಸ್ಟ್ ಕಾರು, ಮರೈನ್ ಒನ್ ಹೆಸರಿನ ಹೆಲಿಕಾಪ್ಟರ್ ಹಾಗೂ ಇನ್ನಿತರ ಸಂಪರ್ಕ ಸಾಧನಗಳನ್ನು ಈ ವಿಮಾನಗಳು ಹೊತ್ತು ತಂದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಟ್ರಂಪ್ ಅವರ ಕಾರನ್ನು ಹೊತ್ತು ತಂದಿದ್ದ ವಿಮಾನವು ಅಹಮದಾಬಾದ್ ನಲ್ಲಿ ಸೋಮವಾರವೇ ಲ್ಯಾಂಡ್ ಆಗಿತ್ತು. ಆ ನಂತರ ಕೆಲ ದಿನಗಳಲ್ಲಿ ಟ್ರಂಪ್ ಅವರ ಇತರ ಸಾಧನೆಗಳನ್ನು ಇನ್ನೆರಡು ವಿಮಾನಗಳನ್ನು ಭಾರತಕ್ಕೆ ತರಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com