ಭಾರತ, ಚೀನಾ ಹೆಚ್ಚು ಪರೀಕ್ಷೆ ನಡೆಸಿದರೆ, ಅಮೆರಿಕಾಗಿಂತಲೂ ಹೆಚ್ಚು ಪ್ರಕರಣ ದಾಖಲಾಗುತ್ತದೆ: ಡೊನಾಲ್ಡ್ ಟ್ರಂಪ್

ಭಾರತ ಹಾಗೂ ಚೀನಾ ರಾಷ್ಟ್ರಗಳು ಹೆಚ್ಚು ಕೊರೋನಾ ವೈರಸ್ ಪರೀಕ್ಷೆಗಳನ್ನು ನಡೆಸಿದಿದ್ದರೆ, ಅಮೆರಿಕಾಗಿಂತಲೂ ಹೆಚ್ಚು ಪ್ರಕರಣಗಳು ಅಲ್ಲಿ ದಾಖಲಾಗುತ್ತಿದ್ದವು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. 
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಭಾರತ ಹಾಗೂ ಚೀನಾ ರಾಷ್ಟ್ರಗಳು ಹೆಚ್ಚು ಕೊರೋನಾ ವೈರಸ್ ಪರೀಕ್ಷೆಗಳನ್ನು ನಡೆಸಿದಿದ್ದರೆ, ಅಮೆರಿಕಾಗಿಂತಲೂ ಹೆಚ್ಚು ಪ್ರಕರಣಗಳು ಅಲ್ಲಿ ದಾಖಲಾಗುತ್ತಿದ್ದವು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. 

ಅಮೆರಿಕಾದಲ್ಲಿ ಕೊರೋನಾ ವೈರಸ್ ಪರೀಕ್ಷೆಗಳ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅಮೆರಿಕಾದಲ್ಲಿ ಈ ವರೆಗೂ 20 ಲಕ್ಷ ಪರೀಕ್ಷೆಗಳು ನಡೆದಿವೆ. ಹೆಚ್ಚು ಪರೀಕ್ಷೆಗಳನ್ನು ನಡೆಸಿದಾಗ ಹೆಚ್ಚೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತವೆ ಎಂಬುದು ನಿಮಗೆ ತಿಳಿದಿರಲಿ. ಪ್ರತೀ ಬಾರಿ ಪರೀಕ್ಷೆ ನಡೆಸಿದಾಗರೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ನಮ್ಮ ಆರೋಗ್ಯ ಸಿಬ್ಬಂದಿಗಳು ಹೆಚ್ಚು ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಭಾರತ ಹಾಗೂ ಚೀನಾದಲ್ಲಿ ಹೆಚ್ಚು ಪರೀಕ್ಷೆಗಳು ನಡೆಸಿದೆ, ಅಲ್ಲಿ ಅಮೆರಿಕಾಗಿಂತಲೂ ಹೆಚ್ಚು ಪ್ರಕರಣ ದಾಖಲಾಗುತ್ತವೆ ಎಂಬುದಕ್ಕೆ ನಾನು ಭರವಸೆ ನೀಡುತ್ತೇನೆ. ನಾವು ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯುತ್ತಮ ಕಾರ್ಯ ಮಾಡುತ್ತಿದ್ದೇವೆಂದು ಹೇಳಿಕೊಂಡಿದ್ದಾರೆ. 

ಪ್ಯೂರಿಟನ್ ವೈದ್ಯಕೀಯ ಉತ್ಪನ್ನಗಳು ಕುರಿತು ಮಾತನಾಡಿದ ಅವರು ಪ್ಯೂರಿಟನ್ ಪರೀಕ್ಷಾ ಸಾಮರ್ಥ್ಯಕ್ಕೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ನಮ್ಮ ರಾಷ್ಟ್ರ ಪುನರಾರಂಭಗೊಳ್ಳುತ್ತಿದೆ. ಯಾರೂ ಊಹಿಸದ ರೀತಿಯಲ್ಲಿ ರಾಷ್ಟ್ರದಲ್ಲಿ ಆರ್ಥಿಕತೆ ಪುನಃಶ್ಚೇತನ ಕಾಣುತ್ತಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com