ಕೊರೋನಾವೈರಸ್: ವಿಶ್ವದೆಲ್ಲೆಡೆ ಸಾವಿನ ಸಂಖ್ಯೆ 3,347ಕ್ಕೆ ಏರಿಕೆ, 98,441 ಮಂದಿಯಲ್ಲಿ ಸೋಂಕು ಪತ್ತೆ

ಕೊರೋನಾ ವೈರಸ್ ಮಹಾಮಾರಿ ಇಡೀ ಜಗತ್ತನ್ನು ಗಡ ಗಡ ನಡುಗಿಸುತ್ತಿದೆ. ಚೀನಾದ ವುಹಾನ್‌ನಲ್ಲಿ ಆರಂಭಗೊಂಡ ಈ ವೈರಸ್ ಪ್ರಪಂಚದಾದ್ಯಂತ ವ್ಯಾಪಿಸಿದೆ. ಅಲ್ಲದೆ, ಭಾರತದಲ್ಲೂ 31 ಸೋಂಕು ಪ್ರಕರಣಗಳು ವರದಿಯಾಗಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊರೋನಾ ವೈರಸ್ ಮಹಾಮಾರಿ ಇಡೀ ಜಗತ್ತನ್ನು ಗಡ ಗಡ ನಡುಗಿಸುತ್ತಿದೆ. ಚೀನಾದ ವುಹಾನ್‌ನಲ್ಲಿ ಆರಂಭಗೊಂಡ ಈ ವೈರಸ್ ಪ್ರಪಂಚದಾದ್ಯಂತ ವ್ಯಾಪಿಸಿದೆ. ಅಲ್ಲದೆ, ಭಾರತದಲ್ಲೂ 31 ಸೋಂಕು ಪ್ರಕರಣಗಳು ವರದಿಯಾಗಿವೆ. 

ಇದರಿಂದಾಗಿ ಎಲ್ಲಿ. ಏನು? ನೆಡೆಯುತ್ತಿದೆ ಎಂದು ಜನರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಆದರೆ, ಪ್ರಪಂಚದಾದ್ಯಂತ ಇದುವರೆಗೆ ಎಷ್ಟು ಜನರು ಕರೋನಾದಿಂದ ಸಾವನ್ನಪ್ಪಿದ್ದಾರೆ. ಸೋಂಕು ದೃಢ ಪಟ್ಟ ಪ್ರಕರಣಗಳು ಎಷ್ಟು? ಎಷ್ಟು ಮಂದಿ ಚೇತರಿಸಿಕೊಂಡಿದ್ದಾರೆ? ಎಂಬ ಅಂಕಿ ಅಂಶ ಇಲ್ಲಿವೆ.

ವಿಶ್ವಾದ್ಯಂತ ಕರೋನಾ ಸೋಂಕಿನ 98,441 ದೃಢ ಪಟ್ಟಿರುವ ಪ್ರಕರಣಗಳು ವರದಿಯಾಗಿದ್ದು, ಕರೋನಾ ಸೋಂಕಿನಿಂದ ಈವರೆಗೆ 3,347ಕ್ಕೆ ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಕೊರೊನಾ ಮಹಾಮಾರಿಯಿಂದ 55,661 ಮಂದಿ ಚೇತರಿಸಿಕೊಂಡಿದ್ದಾರೆ. ಚೀನಾದಲ್ಲಿ ಕೊರೊನಾ ಒಟ್ಟು 80,555 ಸೋಂಕು ಪ್ರಕರಣಗಳು ವರದಿಯಾಗಿದ್ದು, 3,042 ಮಂದಿ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ.

ಕೊರೋನಾ ವೈರಸ್ ವೊದು ಜಾತಿಯ ವೈರಸ್ ಆಗಿದೆ. ಸೂಕ್ಷ್ಮ ದರ್ಶಕದಲ್ಲಿ ಇದು ಕಿರೀಟ ರೀತಿ ಕಾಣಿಸುತ್ತದೆ. ಲ್ಯಾಟಿನ್ ಭಾಷೆಯಲ್ಲಿ ಕೊರೋನಾ ಎಂದರೆ ಕಿರೀಟ ಎಂದರ್ಥ. ಹೀಗಾಗಿ ವೈರಸ್'ಗೆ ಕೊರೋನಾ ಹೆಸರು. ಚೀನಾದ ವುಹಾನ್ ನಗರದಲ್ಲಿನ ಅಕ್ರಮ ವನ್ಯ ಜೀವಿ ಮಾಂಸ ಕೇಂದ್ರದ ಮೂಲಕ ಮಾನವರಿಗೆ ವೈರಸ್ ತಗುಲಿದೆ. ವೈರಸ್ ಒಂಟೆ, ಬೆಕ್ಕು, ಬಾವಲಿ ಸೇರಿದಂತೆ ಹಲವಾರು ಪ್ರಾಣಿಗಳಲ್ಲೂ ಪ್ರವೇಶಿಸುತ್ತಿದೆ. ಪ್ರಾಣಿಗಳ ದೇಹ ಸೇರಿದ ಈ ವೈರಸ್ ಅಪರೂಪ ಎಂಬಂತೆ ಮನುಷ್ಯರ ದೇಹವನ್ನೂ ಸೇರುತ್ತಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com