ಯುರೋಪ್, ಅಮೆರಿಕಾ ಬಳಿಕ ಕೊರೋನಾ ಸೃಷ್ಟಿಕರ್ತ ಭಾರತ ಎಂದು ಹೇಳಿ ನಗೆಪಾಟಲಿಗೀಡಾದ ಚೀನಾ!

ಇಡೀ ವಿಶ್ವವನ್ನೇ ಆತಂಕಕ್ಕೆ ದೂಡಿರುವ ಕೊರೋನಾ ವೈರಸ್ ಮೊದಲು ಪತ್ತೆಯಾದದ್ದು ಎಲ್ಲಿ ಎಂದು ಕೇಳಿದರೆ, ಸಣ್ಣ ಮಕ್ಕಳೂ ಕೂಡ ಚೀನಾ ಎಂದು ಉತ್ತರ ನೀಡುತ್ತಿವೆ. ಆದರೆ, ತನಗಂಟಿರುವ ಕಳಂಕನ್ನು ದೂರಾಗಿಸಿಕೊಳ್ಳಲು ಚೀನಾ ಇದೀಗ ಭಾರತದ ಮೇಲೆ ಗೂಬೆ ಕೂರಿಸುವ ಪ್ರಯತ್ನಗಳನ್ನು ಮಾಡುತ್ತಿದೆ. 

Published: 29th November 2020 11:44 AM  |   Last Updated: 29th November 2020 11:44 AM   |  A+A-


file photo

ಸಂಗ್ರಹ ಚಿತ್ರ

Posted By : Manjula VN
Source : Online Desk

ನವದೆಹಲಿ: ಇಡೀ ವಿಶ್ವವನ್ನೇ ಆತಂಕಕ್ಕೆ ದೂಡಿರುವ ಕೊರೋನಾ ವೈರಸ್ ಮೊದಲು ಪತ್ತೆಯಾದದ್ದು ಎಲ್ಲಿ ಎಂದು ಕೇಳಿದರೆ, ಸಣ್ಣ ಮಕ್ಕಳೂ ಕೂಡ ಚೀನಾ ಎಂದು ಉತ್ತರ ನೀಡುತ್ತಿವೆ. ಆದರೆ, ತನಗಂಟಿರುವ ಕಳಂಕನ್ನು ದೂರಾಗಿಸಿಕೊಳ್ಳಲು ಚೀನಾ ಇದೀಗ ಭಾರತದ ಮೇಲೆ ಗೂಬೆ ಕೂರಿಸುವ ಪ್ರಯತ್ನಗಳನ್ನು ಮಾಡುತ್ತಿದೆ. 

ಕೊರೋನಾ ವೈರಸ್ ಮೂಲ ಚೀನಾ ಅಲ್ಲ, ಭಾರತ ಎಂದು ಪ್ರತಿಪಾದಿಸುವ ಮೂಲಕ ಚೀನಾ ಇದೀಗ ವಿಶ್ವದ ಮುಂದೆ ನಗೆಪಾಟಲಿಗೀಡಾಗಿದೆ. 

2019ರ ಬೇಸಿಗೆಯಲ್ಲಿ ಭಾರತದಲ್ಲಿ ಪ್ರಾಣಿಗಳಿಂದ ಮಾನವರಿಗೆ ಅಶುದ್ಧ ನೀರಿನ ಮೂಲಕ ಈ ವೈರಸ್ ಹಬ್ಬಿದೆ. ಬಳಿಕ ಅದು ಯಾರಿಗೂ ಗೊತ್ತಾಗದ ಹಾಗೆ ವುಹಾನ್ ತಲುಪಿದೆ. ಅಲ್ಲಿ ಮೊದಲು ಪತ್ತೆಯಾಗಿದೆ ಎಂದು ಚೀನಾ ಸರ್ಕಾರಿ ಸ್ವಾಮ್ಯದ ವೈಜ್ಞಾನಿಕ ಅಕಾಡೆಮಿಯ ತಜ್ಞರ ತಂಡ ವಾದ ಮಂಡಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಕೊರೋನಾ ಸಂಬಂಧ ತನಗಂಟಿರುವ ಕುಖ್ಯಾತಿಯನ್ನು ತೊಡೆದು ಹಾಕಲು ಚೀನಾ ಈ ರೀತಿಯ ವಿತಂಡ ವಾದ ಮಂಡಿಸುತ್ತಿರುವುದು ಇದೇ ಮೊದಲಲ್ಲ. ಇಟಲಿ, ಅಮೆರಿಕಾ, ಯುರೋಪ್ ಮೇಲೂ ಇದೇ ರೀತಿಯ ಆರೋಪ ಮಾಡಿತ್ತು. ಅದಕ್ಕೆ ಯಾವುದೇ ಸಾಕ್ಷ್ಯ ನೀಡಿರಲಿಲ್ಲ. ಇದೀಗ ಭಾರತದ ಜೊತೆ ಗಡಿ ವಿವಾದ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಅದರ ಜೊತೆ ಕೊರೋನಾ ವೈರಸ್ ವಿಚಾರವನ್ನು ತಳಕು ಹಾಕಲು ಚೀನಾ ಯತ್ನಿಸುತ್ತಿದೆ. 

ಚೀನಾದ ವುಹಾನ್ ನಲ್ಲಿ ಮೊದಲು ಕೊರೋನಾ ವೈರಸ್ ಪತ್ತೆಯಾಯಿತಾದರೂ ಅದರ ಮೂಲ ವೈರಾಣು ಅಲ್ಲ. ಬಾಂಗ್ಲಾ, ಅಮೆರಿಕಾ, ಗ್ರೀಸ್, ಅಸ್ಟ್ರೇಲಿಯಾ, ಭಾರತ, ಇಟಲಿ ಚೆಕ್ ಗಣರಾಜ್ಯ, ರಷ್ಯಾ ಅಥವಾ ಸರ್ಬಿಯಾ ದೇಶಗಳು ಕೊರೋನಾ ಮೂಲವಾಗಿರಬಹುದು. ಇದಕ್ಕೆ ಪುಷ್ಟಿ ನೀಡುವಂತೆ ಭಾರತ ಹಾಗೂ ಬಾಂಗ್ಲಾದೇಶದಲ್ಲಿ ಕಡಿಮೆ ರೂಪಾಂತರದ ವೈರಾಣು ಮಾದರಿಗಳು ಪತ್ತೆಯಾಗಿವೆ. 

ಎರಡೂ ದೇಶಗಳು ಅಕ್ಕಪಕ್ಕದಲ್ಲೇ ಇವೆ. ಹೀಗಾಗಿ ಅಲ್ಲೇ ಕೊರೋನಾ ವೈರಸ್ ಮೊದಲು ಪತ್ತೆಯಾಗಿರಬಹುದು. ನೀರಿನ ಕೊರತೆಯಿಂದಾಗಿ ಮಂಗಗಳಂತಹ ವನ್ಯಜೀವಿಗಳು ತಮ್ಮ ತಮ್ಮ ನಡುವೆಯೇ ನೀರಿಗಾಗಿ ಕಾಳಗದಲ್ಲಿ ತೊಡಗಿದಾಗ ಮಾನವರ ಮಧ್ಯಪ್ರವೇಶವಾಗಿ ವೈರಸ್ ಮಾನವರಿಗೆ ಅಂಟಿರಬಹುದು. ಉಷ್ಣಾಂಶ ಹೆಚ್ಚಿಯೂ ಮಾನವರಿಗೆ ಈ ವೈರಸ್ ಅಂಟಿರಬಹುದು. ಭಾರತದಲ್ಲಿ ಮೊದಲೇ ಆರೋಗ್ಯ ವ್ಯವಸ್ಥೆ ಸರಿಯಿಲ್ಲ. ಯುವಕರ ಸಂಖ್ಯೆ ಹೆಚ್ಚಿರುವುದರಿಂದ ಹಲವು ತಿಂಗಳ ಕಾಲ ವೈರಸ್ ಬಗ್ಗೆ ಗೊತ್ತಾಗದೇ ಹೋಗಿರಬಹುದು ಎಂದು ಹೇಳಿಕೊಂಡಿದೆ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿವೆ. 

Stay up to date on all the latest ಅಂತಾರಾಷ್ಟ್ರೀಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp